ಹೊಸದಿಗಂತ ವರದಿ ಅಂಕೋಲಾ:
ಹುಬ್ಬಳ್ಳಿ- ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ಎಕ್ಕೆಗುಳಿ ಬಳಿ ಚಿರತೆಯೊಂದು ಅಪರಿಚಿತ ವಾಹನ ಬಡಿದು ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಸುಮಾರು 6 ವರ್ಷದ ಗಂಡು ಚಿರತೆ ಇದಾಗಿದ್ದು ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿದೆ ಎಂದು ಅಂದಾಜಿಸಲಾಗಿದೆ. ಚಿರತೆಯ ಮುಖ ಕಣ್ಣು, ಕಿವಿಯಿಂದ ರಕ್ತ ಜಿನುಗುತ್ತಿರುವುದು ಪತ್ತೆಯಾಗಿದೆ. ಮಾಸ್ತಿಕಟ್ಟಾ ವಲಯದ ಎಕ್ಕೆಗುಳಿ (ಬಡಿಗೋಣ) ಈ ಘಟನೆ ನಡೆದಿದ್ದು ಮೃತ ಚಿರತೆ ಹೆದ್ದಾರಿಯ ಪಕ್ಕದ ಪೊದೆಯಲ್ಲಿ ಸತ್ತು ಬಿದ್ದಿರುವುದನ್ನು ಸಂಜೆ 6.30 ರ ಸುಮಾರಿಗೆ ಅರಣ್ಯ ಸಿಬ್ಬಂದಿ ಪತ್ತೆ ಮಾಡಿದ್ದಾರೆ.
ಡಿಸಿಎಫ್ ಅಂತೋನಿ, ಎಸಿಎಫ್ ಪ್ರಫುಲ್ಲ ಶೆಟ್ಟಿ ಮಾರ್ಗದರ್ಶನದಲ್ಲಿ ಮಾಸ್ತಿಕಟ್ಟಾ ಅರಣ್ಯಾಧಿಕಾರಿ ಪ್ರವೀಣ ನಾಯಕ, ಉಪ ಅರಣ್ಯಾಧಿಕಾರಿ ಎಂ.ಬಿ. ಗೌಡ. ಬೀಟ್ ಫಾರೆಸ್ಟರ್ ಈರಣ್ಣ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.



