ಹೊಸದಿಗಂತ ವರದಿ ಸಿಂದಗಿ:
ತಾಲೂಕಿನ ಹಚ್ಯಾಳ ಗ್ರಾಮದ ಜಮೀನೊಂದರ ಪತ್ರಾಸ್ ಶೆಡ್‌ನಲ್ಲಿ ವ್ಯಕ್ತಿಯೊಬ್ಬರನ್ನು ಹರಿತವಾದ ಆಯುಧದಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಹಚ್ಯಾಳ ಗ್ರಾಮದ ಕರೆಪ್ಪ ಚಂದ್ರಾಮ ಬಿರಾದಾರ (55) ಕೊಲೆಯಾದ ವ್ಯಕ್ತಿ.
ಇದನ್ನೂ ಓದಿ:
ದುಷ್ಕರ್ಮಿಗಳು ಕರೆಪ್ಪ ಬಿರಾದಾರ ಈನಿಗೆ ಹರಿತವಾದ ಆಯುಧದಿಂದ ಹತ್ಯೆ ಮಾಡಿ, ಪರಾರಿಯಾಗಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



