ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಟಾದಲ್ಲಿ ಛೋಟಿ ಪುಲಿಯಾದಿಂದ ಚಂಬಲ್ ನದಿಗೆ ಕಾರು ಬಿದ್ದಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. ಕಾರ್ನಲ್ಲಿದ್ದ ಎಂಟು ಮಂದಿ ಮದುವೆಗೆ ತೆರಳುತ್ತಿದ್ದರು. ವರ ಕೂಡ ಕಾರ್ನಲ್ಲಿಯೇ ಇದ್ದ. ಚಾಲಕನ ನಿಯಂತ್ರಣ ತಪ್ಪಿ ಕಾರ್ ನದಿಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರನ ಕಡೆಯವರು ಬೆಳಗ್ಗೆ ಮಾಧೋಪುರದಿಂದ ಉಜ್ಜಯನಿ ಕಡೆ ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರ್ ನದಿಗೆ ಬಿದ್ದಿದೆ. ನೀರಿಗೆ ಬಿದ್ದ ತಕ್ಷಣ ಕಾರಿನ ಕಿಟಕಿ ತೆಗೆಯಲು ಯತ್ನಿಸಿದ್ದು, ಒಂದು ಕಿಟಕಿ ಮಾತ್ರ ತೆರೆಯಲು ಸಾಧ್ಯ ಆಗಿದೆ.
ಸ್ಥಳೀಯರು ನೀರಿನಲ್ಲಿ ಕಾರನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪರಿಹಾರ ಕಾರ್ಯ ಆರಂಭವಾಗಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ.
Rajasthan | Eight people died after their car fell off Chhoti Puliya and into the Chambal river in Kota. The occupants of the car were going to a wedding. The car was retrieved with the help of a crane. pic.twitter.com/TYjWlioP2q
— ANI (@ANI) February 20, 2022