ಭಾರತದಲ್ಲೇ ಸೆಮಿಕಂಡಕ್ಟರ್ ಉತ್ಪಾದನೆ- ಮುಂದೆ ಬಂದಿವೆ ಈ ಕಂಪನಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್
ಮೊಬೈಲ್ ಫೋನುಗಳಿಂದ ಹಿಡಿದು ಟಿವಿ-ಕಂಪ್ಯೂಟರುಗಳವರೆಗೆ ಎಲ್ಲ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬಳಸುವ ಸೆಮಿಕಂಡಕ್ಟರ್ ಅಥವಾ ಚಿಪ್ ವಿಚಾರದಲ್ಲಿ ಆತ್ಮನಿರ್ಭರವಾಗುವುದಕ್ಕೆ ಭಾರತ ಉತ್ತೇಜಕ ಕ್ರಮವನ್ನು ಘೋಷಿಸಿ ಕಂಪನಿಗಳನ್ನು ಇಲ್ಲಿಯೇ ಉತ್ಪಾದನೆಗೆ ಆಹ್ವಾನಿಸಿತ್ತು. ಈ ನಿಟ್ಟಿನಲ್ಲಿ ಮೊದಲ ಸುತ್ತಿನ ಅರ್ಜಿ ಆಹ್ವಾನ ಫೆಬ್ರವರಿ 15ಕ್ಕೆ ಮುಕ್ತಾಯವಾಗಿದ್ದು, ಐದು ಕಂಪನಿಗಳು ಬೇರೆ ಬೇರೆ ವಿಧದ ಸೆಮಿಕಂಡಕ್ಟರ್ ತಯಾರಿಕೆಗೆ ಮುಂದೆ ಬಂದಿವೆ.
ವೇದಾಂತ ಮತ್ತು ಫಾಕ್ಸ್ ಕಾನ್ ಜಂಟಿ ಪ್ರಸ್ತಾವ, ಐ ಜಿ ಎಸ್ ಎಸ್ ವೆಂಚುರ್ಸ್, ಐ ಎಸ್ ಎಮ್ ಸಿ ಈ ಪೈಕಿ ಪ್ರಮುಖ ಕಂಪನಿಗಳು. ಇವು 13.6 ಬಿಲಿಯನ್ ಡಾಲರುಗಳ ಮೌಲ್ಯದ ಎಲೆಕ್ಟ್ರಾನಿಕ್ ಚಿಪ್ ಉತ್ಪಾದನಾ ಘಟಕವನ್ನೇ ಸ್ಥಾಪಿಸುವುದಕ್ಕೆ ಮುಂದೆ ಬಂದಿದ್ದು, ಸುಮಾರು 5.6 ಬಿಲಿಯನ್ ಡಾಲರ್ ಸಹಾಯವನ್ನು ಸರ್ಕಾರದಿಂದ ಬಯಸಿವೆ.
ಇನ್ನು, ಸ್ಪೆಲ್ ಸೆಮಿಕಂಡಕ್ಟರ್ಸ್, ಎಚ್ ಸಿ ಎಲ್, ಸಿರ್ಮ ಟೆಕ್ನಾಲಜಿ, ವಲೆಂಕನಿ ಎಲೆಕ್ಟ್ರಾನಿಕ್ಸ್ ಇವೆಲ್ಲ ಸೆಮಿಕಂಡಕ್ಟರ್ ಪ್ಯಾಕೇಜಿಂಗ್ ವಿಭಾಗದಲ್ಲಿ ಅರ್ಜಿ ಸಲ್ಲಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!