ಹೊಸದಿಗಂತ ಡಿಜಿಟಲ್ ಡೆಸ್ಕ್
ಈ ತಿಂಗಳ ಆರಂಭದಲ್ಲಿ ವಾರಣಾಸಿ ಮಸೀದಿಯ ಆವರಣದಲ್ಲಿ ನಡೆಸಿದ ಸಮೀಕ್ಷೆಯ ವೀಡಿಯೊ ದೃಶ್ಯಾವಳಿಗಳು ಮತ್ತು ಛಾಯಾಚಿತ್ರಗಳು ಸೋರಿಕೆಯಾಗಿದ್ದು ಹಿಂದೂ ಪರ ಅರ್ಜಿದಾರ ವಾದಗಳಿಗೆ ಪುಷ್ಟಿ ನೀಡುವಂತಹ ದೃಶ್ಯಾವಳಿಗಳು ಗೋಚರಿಸಿವೆ.
Leaked Video shows its a shivling. This proves how Jihadis created a fake narrative to call it as fountain so that Muslims don't allow Hindus to reclaim #GyanvapiMasjid
They were even planning to destroy Shivling. Mosque committee should be jailed#GyanvapiTapes#GyanvapiCase pic.twitter.com/tll6HqOyoE— GyanGanga (@sarinmall85) May 30, 2022
ಈ ವೀಡಿಯೊಗಳು ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ವಿಡಿಯೋದಲ್ಲಿ ಗ್ಯಾನವಾಪಿ ಭಾವಿಯ ಆವರಣದ ಭಾವಿಯಲ್ಲಿ ಶಿವಲಿಂಗ ಹೊರತೆಗೆಯುತ್ತಿರುವುದರ ಚಿತ್ರಣವಿದೆ. ವಿಡಿಯೋವನ್ನು ಗಮನಿಸಿದರೆ ಅಲ್ಲಿರುವುದು ಶಿವಲಿಂಗ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದ್ದು, ಅದು ಶಿವಲಿಂಗವಲ್ಲ, ಕಾರಂಜಿ ಎಂಬ ವಾದ ಬಲಹೀನವಾದಂತೆ ಅನ್ನಿಸುತ್ತಿದೆ. ಶಿವಲಿಂಗದ ಮೇಲ್ಭಾಗದಲ್ಲಿ ಸಿಮೆಂಟ್ ಥರದ ಪದಾರ್ಥ ಬಳಸಿ ಅದನ್ನು ಬೇರೆ ವಸ್ತುವಾಗಿ ಬಿಂಬಿಸಲು ಹೊರಟಿರುವ ಪ್ರಯತ್ನವಾಗಿದೆ ಎಂದು ವಿಶ್ಲೇಷಿಸಬಹುದಾದರೂ, ಇವೇ ದೃಶ್ಯಗಳು ನಿಜವಾಗಿದ್ದಲ್ಲಿ ಅದು ಚಿಲುಮೆ ಅಲ್ಲ ಎಂದು ಯಾರೂ ಹೇಳಬಹುದಾಗಿದೆ.
ವೈರಲ್ ಆಗಿರುವ ಕೆಲ ಛಾಯಚಿತ್ರಗಳಲ್ಲಿ ಮಸೀದಿಯ ಒಳಗೆ ಹಿಂದೂ ಹಿಂದೂ ಲಕ್ಷಣಗಳು ಮತ್ತು ಚಿಹ್ನೆಗಳಿರುವುದು, ಮಸೀದಿಯ ಒಂದು ಪಾಶ್ವದ ಹೊರಗೋಡೆ ಸಂಪೂರ್ಣ ಹಿಂದೂ ಧರ್ಮದ ಕೆತ್ತನೆಗಳಿಂದ ಆವೃತವಾಗಿರುವುದು ವಾಸ್ತವವನ್ನು ಬಿಚ್ಚಿಡುತ್ತಿದೆ. ಅದಾಗ್ಯೂ ವಿಡಿಯೋ ಹೇಗೆ ಲೀಕ್ ಆಗಿದೆ ಎಂಬ ವಿಚಾರದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ವಾರಣಾಸಿ ಜಿಲ್ಲಾ ನ್ಯಾಯಾಲಯವು ಗ್ಯಾನವಾಪಿ ಪ್ರಕರಣದ ಮುಂದಿನ ವಿಚಾರಣೆಯ ದಿನಾಂಕವನ್ನು ಜುಲೈ 4 ಮುಂದೂಡಿದೆ.