ಜ್ಞಾನವಾಪಿ ಶಿವಲಿಂಗ- ಕೆಲ ಮಾಧ್ಯಮಗಳಲ್ಲಿ ಟ್ರೆಂಡ್ ಆಗುತ್ತಿದೆ ವಿಡಿಯೋ ಕ್ಲಿಪ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಈ ತಿಂಗಳ ಆರಂಭದಲ್ಲಿ ವಾರಣಾಸಿ ಮಸೀದಿಯ ಆವರಣದಲ್ಲಿ ನಡೆಸಿದ ಸಮೀಕ್ಷೆಯ ವೀಡಿಯೊ ದೃಶ್ಯಾವಳಿಗಳು ಮತ್ತು ಛಾಯಾಚಿತ್ರಗಳು ಸೋರಿಕೆಯಾಗಿದ್ದು ಹಿಂದೂ ಪರ ಅರ್ಜಿದಾರ ವಾದಗಳಿಗೆ ಪುಷ್ಟಿ ನೀಡುವಂತಹ ದೃಶ್ಯಾವಳಿಗಳು ಗೋಚರಿಸಿವೆ.

ಈ ವೀಡಿಯೊಗಳು ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ವಿಡಿಯೋದಲ್ಲಿ ಗ್ಯಾನವಾಪಿ ಭಾವಿಯ ಆವರಣದ ಭಾವಿಯಲ್ಲಿ ಶಿವಲಿಂಗ ಹೊರತೆಗೆಯುತ್ತಿರುವುದರ ಚಿತ್ರಣವಿದೆ. ವಿಡಿಯೋವನ್ನು ಗಮನಿಸಿದರೆ ಅಲ್ಲಿರುವುದು ಶಿವಲಿಂಗ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದ್ದು, ಅದು ಶಿವಲಿಂಗವಲ್ಲ, ಕಾರಂಜಿ ಎಂಬ ವಾದ ಬಲಹೀನವಾದಂತೆ ಅನ್ನಿಸುತ್ತಿದೆ. ಶಿವಲಿಂಗದ ಮೇಲ್ಭಾಗದಲ್ಲಿ ಸಿಮೆಂಟ್ ಥರದ ಪದಾರ್ಥ ಬಳಸಿ ಅದನ್ನು ಬೇರೆ ವಸ್ತುವಾಗಿ ಬಿಂಬಿಸಲು ಹೊರಟಿರುವ ಪ್ರಯತ್ನವಾಗಿದೆ ಎಂದು ವಿಶ್ಲೇಷಿಸಬಹುದಾದರೂ, ಇವೇ ದೃಶ್ಯಗಳು ನಿಜವಾಗಿದ್ದಲ್ಲಿ ಅದು ಚಿಲುಮೆ ಅಲ್ಲ ಎಂದು ಯಾರೂ ಹೇಳಬಹುದಾಗಿದೆ.
ವೈರಲ್ ಆಗಿರುವ ಕೆಲ ಛಾಯಚಿತ್ರಗಳಲ್ಲಿ ಮಸೀದಿಯ ಒಳಗೆ ಹಿಂದೂ ಹಿಂದೂ ಲಕ್ಷಣಗಳು ಮತ್ತು ಚಿಹ್ನೆಗಳಿರುವುದು, ಮಸೀದಿಯ ಒಂದು ಪಾಶ್ವದ ಹೊರಗೋಡೆ ಸಂಪೂರ್ಣ ಹಿಂದೂ ಧರ್ಮದ ಕೆತ್ತನೆಗಳಿಂದ ಆವೃತವಾಗಿರುವುದು ವಾಸ್ತವವನ್ನು ಬಿಚ್ಚಿಡುತ್ತಿದೆ. ಅದಾಗ್ಯೂ ವಿಡಿಯೋ ಹೇಗೆ ಲೀಕ್‌ ಆಗಿದೆ ಎಂಬ ವಿಚಾರದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ವಾರಣಾಸಿ ಜಿಲ್ಲಾ ನ್ಯಾಯಾಲಯವು ಗ್ಯಾನವಾಪಿ ಪ್ರಕರಣದ ಮುಂದಿನ ವಿಚಾರಣೆಯ ದಿನಾಂಕವನ್ನು ಜುಲೈ 4 ಮುಂದೂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!