Sunday, December 3, 2023

Latest Posts

ಟಾಲಿವುಡ್‌ನಲ್ಲಿ ರಾಕಿಭಾಯ್‌ ಮಿಂಚಿಂಗ್, ರಾರಾಜು ಸಿನಿಮಾದಲ್ಲಿ ಯಶ್-ರಾಧಿಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ‌

ಕೆಜಿಎಫ್ ಮತ್ತು ಕೆಜಿಎಫ್ 2 ಚಿತ್ರಗಳ ಮೂಲಕ ಕನ್ನಡದ ಹೀರೋ ಯಶ್ ಬಾಕ್ಸ್ ಆಫೀಸ್ ನಲ್ಲಿ ವಿಶೇಷ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್, ಕೆಜಿಎಫ್ 2 ಚಿತ್ರಗಳಲ್ಲಿ ನಾಯಕ ನಟನಾಗಿ ಪ್ರೇಕ್ಷಕರ ಕ್ರೇಜ್ ಗಳಿಸಿರುವ ಯಶ್ ಅಭಿನಯದ ಸಿನಿಮಾವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗುತ್ತಿದೆ.

ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ ಸಂತು ಸ್ಟ್ರೈಟ್‌ ಫಾರ್ವರ್ಡ್‌ ಸಿನಿಮಾ ಇದೀಗ ತೆಲುಗಿನಲ್ಲಿ  ‘ರಾರಾಜು’ ಸಿನಿಮಾ ಆಗಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಚಿತ್ರದ ಟ್ರೈಲರ್ ಅನ್ನು ಖ್ಯಾತ ನಿರ್ದೇಶಕ ವಿವಿ ವಿನಾಯಕ್ ಬಿಡುಗಡೆ ಮಾಡಿದ್ದಾರೆ. ಇಡೀ ಟ್ರೇಲರ್ ಪ್ರೇಕ್ಷಕರಿಗೆ ಮನರಂಜನೆ ನೀಡುವಂತಿದೆ ಎಂದು ನಿರ್ದೇಶಕ ವಿವಿ ವಿನಾಯಕ್ ಹೇಳಿದ್ದಾರೆ. ಕಳೆದ 25 ವರ್ಷಗಳಿಂದ ಹಲವು ಚಿತ್ರಗಳನ್ನು ಬಿಡುಗಡೆ ಮಾಡಿರುವ ಪದ್ಮಾವತಿ ಪಿಕ್ಚರ್ಸ್ ಸುಬ್ಬರಾವ್ ಅವರು ಯಶ್ ಅಭಿನಯದ ಚಿತ್ರ ಬಿಡುಗಡೆ ಮಾಡುತ್ತಿರುವುದು ಸಂತಸ ತಂದಿದೆ.ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಕಾಣಲಿ ಎಂದು ಹರಸಿದರು.

ಜೂನ್ ಎರಡನೇ ವಾರದಲ್ಲಿ ʻರಾರಾಜುʼ ಚಿತ್ರವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರ ಯೂನಿಟ್ ಸಜ್ಜಾಗಿದೆ. ಚಿತ್ರದಲ್ಲಿ ಯಶ್ ಪತ್ನಿ ರಾಧಿಕಾ ಪಂಡಿತ್ ಜೊತೆ ನಟಿಸಿದ್ದು, ಕನ್ನಡದಲ್ಲಿ ಚಿತ್ರ ಭರ್ಜರಿ ಯಶಸ್ಸು ಕಂಡಿದೆ ಎಂದು ನಿರ್ಮಾಪಕ ಸುಬ್ಬರಾವ್ ತಿಳಿಸಿದರು. ಇದೀಗ ಯಶ್ ಅಭಿನಯದ ‘ರಾರಾಜು’ ಬಾಕ್ಸ್ ಆಫೀಸ್ ನಲ್ಲಿ ಯಾವ ರೀತಿಯ ಯಶಸ್ಸು ಪಡೆಯಲಿದೆ ಎಂಬುದನ್ನು ತಿಳಿಯಲು ಈ ಸಿನಿಮಾ ರಿಲೀಸ್ ಆಗುವವರೆಗೂ ಕಾಯಲೇಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!