ಹೊಸದಿಗಂತ ಡಿಜಿಟಲ್ ಡೆಸ್ಕ್
ನೆದರ್ಲೆಂಡ್ಸ್ ವಿರುದ್ಧ ಏಕದಿನ ಸರಣಿಯಲ್ಲಿ ಆಡುತ್ತಿರುವ ಪಾಕ್ ತಂಡವು ಪ್ರವಾಸದ ಮಧ್ಯೆ ಡಚ್ ಫುಟ್‌ಬಾಲ್ ಕ್ಲಬ್ ಅಜಾಕ್ಸ್‌ನ ತವರು ಮೈದಾನಕ್ಕೆ ಭೇಟಿ ನೀಡಿತ್ತು. ಈ ವೇಳೆ ಪಾಕಿಸ್ತಾನದ ಆಟಗಾರರು ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ನ ದಂತಕಥೆ ಹಾಗೂ ಅಜಾಕ್ಸ್ ನ ಸಿಇಒ ಆದ ಆಡ್ವಿನ್ ವಾನ್ ಡೆರ್ ಸಾರ್ ಮತ್ತು ಕ್ಲಬ್‌ನ ಇತರ ಆಟಗಾರರು ಮತ್ತು ಸಿಬ್ಬಂದಿಯನ್ನು ಭೇಟಿಯಾದರು.
ಈ ಸಂದರ್ಭದಲ್ಲಿ ಪಾಕ್ ಸೀಮಿತ ಓವರ್ ಕ್ರಿಕೆಟ್ ತಂಡದ ಉಪನಾಯಕ ಶಾದಾಬ್ ಖಾನ್ ʼನಾಯಕ ಬಾಬರ್ ಅಜಮ್ ರನ್ನು ಇವರು ಕ್ರಿಕೆಟ್‌ನ ‘ಕ್ರಿಸ್ಚಿಯಾನಲ್ ಮೆಸ್ಸಿ’ ಇದ್ದಂತೆ ಎಂದು ಬಣ್ಣಿಸಿ ವ್ಯಾನ್ ಡೆರ್ ಸಾರ್‌ಗೆ ಪರಿಚಯ ಮಾಡಿಕೊಟ್ಟರು.! ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪಾಕ್ ಉಪನಾಯಕ ತನ್ನ ನಾಯಕನಿಗೆ ನೀಡಿದ ಬಿಲ್ಡಪ್ ನೇಟಿಜನ್ ಗಳಿಗೆ ನಗು ಉಕ್ಕಿಸಿದೆ.
'𝐇𝐞'𝐬 𝐂𝐫𝐢𝐬𝐭𝐢𝐚𝐧𝐚𝐥 𝐌𝐞𝐬𝐬𝐢 (𝐨𝐟 𝐜𝐫𝐢𝐜𝐤𝐞𝐭)'
Shadab Khan introducing Babar Azam to @AFCAjax players.pic.twitter.com/4KnJGEzmSv
— Team Babar Azam (@Team_BabarAzam) August 19, 2022
ಮೆಸ್ಸಿ ಮತ್ತು ರೊನಾಲ್ಡೊ ಸಾರ್ವಕಾಲಿಕ ಇಬ್ಬರು ಅತ್ಯುತ್ತಮ ಫುಟ್‌ಬಾಲ್ ಆಟಗಾರರು. ಸುಧೀರ್ಘ ಕಾಲದಿಂದ ವಿಶ್ವ ಫುಟ್‌ಬಾಲ್‌ನಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಬಾಬರ್ ಕ್ರಿಕೆಟ್ ನಲ್ಲಿ ಉತ್ತಮ ಸಾಧನೆಗಳನ್ನು ಮಾಡಿದ್ದಾರಾದರೂ ಶ್ರೇಷ್ಠ ಕ್ರಿಕೆಟಿಗ ಎನಿಸಿಕೊಳ್ಳಲು ಸಾಕಷ್ಟು ದೂರ ಕ್ರಮಿಸಬೇಕಿದೆ. ಆ ಬಳಿಕವೂ ತನ್ನ ನಾಯಕನ ಗುಣಗಾನ ಮುಂದುವರೆಸಿದ ಶಾದಾಬ್, ಕ್ರಿಕೆಟ್ ಮೈದಾನದಲ್ಲಿ ಬಾಬರ್ ರೊನಾಲ್ಡೋ- ಮೆಸ್ಸಿ ಅವರಂತೆ ಸರ್ವಶ್ರೇಷ್ಠವಾಗಿ ಆಡುವ ಗುಣಲಕ್ಷಣಗಳನ್ನು ಹೊಂದಿದ್ದಾರೆ ಎಂದಿದ್ದಾರೆ.