ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಗಾಯಕ ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ ವಿಚ್ಛೇದನ ಪಡೆದಿದ್ದು, ಪತ್ನಿಗೆ ಒಂದು ಕೋಟಿ ರೂಪಾಯಿಗಳ ಜೀವನಾಂಶ ನೀಡಲು ಹನಿ ಸಿಂಗ್ ಮುಂದಾಗಿದ್ದಾರೆ .
2011 ರಲ್ಲಿ ದೆಹಲಿಯ ಗುರುದ್ವಾರದಲ್ಲಿ ಇಬ್ಬರೂ ವಿವಾಹವಾಗಿದ್ದರು. ಇದೀಗ 11 ವರ್ಷಗಳ ನಂತರ ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ ದೂರವಾಗಿದ್ದಾರೆ.
ಜೀವನಾಂಶ ಚೆಕ್ ನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯದಲ್ಲಿ ಹಸ್ತಾಂತರಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು 2023ರ ಮಾರ್ಚ್ 22ಕ್ಕೆ ಮುಂದೂಡಲಾಗಿದೆ.
ಶಾಲಿನಿ ಕಳೆದ ವರ್ಷ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಹನಿ ಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಆರೋಪ ಮತ್ತು ಇತರ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧವಿದೆ ಎಂದು ಶಾಲಿನಿ ಆರೋಪಿಸಿದ್ದರು. ಅಲ್ಲದೇ, ಹನಿ ಸಿಂಗ್‌ಗೆ ವಿಚ್ಛೇದನ ಭತ್ಯೆಗಾಗಿ 10 ಕೋಟಿ ರೂ.ಗಳ ಪರಿಹಾರವನ್ನು ಶಾಲಿನಿ ಕೇಳಿದ್ದರು ಎನ್ನಲಾಗಿದೆ. ಆದರೆ, ಈಗ ಇಬ್ಬರೂ 1 ಕೋಟಿ ಪರಿಹಾರದ ಒಪ್ಪಂದಕ್ಕೆ ಬಂದಿದ್ದಾರೆ.