ಅಬ್ಬಬ್ಬಾ! ಮಿಂಚಿನಂತಿದೆ ‌ʻಆದಿಪುರುಷ್‌ʼ ಟೀಸರ್‌ ಪೋಸ್ಟರ್: ರಾಮನಾಗಿ ಪ್ರಭಾಸ್‌ ಎಂಟ್ರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಡೀ ಭಾರತೀಯ ಸಿನಿ ಪ್ರೇಕ್ಷಕರು ಕಾಯುತ್ತಿರುವ ಅತಿ ದೊಡ್ಡ ಮಹಾಕಾವ್ಯ ಚಿತ್ರ ʻಆದಿಪುರುಷ್‌ʼ. ಈ ಸಿನಿಮಾದಲ್ಲಿ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿರುವುದರಿಂದ ಪ್ರಭಾಸ್‌ನನ್ನು ತೆರೆ ಮೇಲೆ ರಾಮನಾಗಿ ನೋಡಲು ಜನ ಕಾತರರಾಗಿದ್ದಾರೆ.

ಇದೀಗ ಚಿತ್ರತಂಡ ಈ ಚಿತ್ರದ ಟೀಸರ್ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಪೋಸ್ಟರ್‌ನಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ಗೂಸ್‌ಬಂಪ್ಸ್ ನೀಡುತ್ತಿದ್ದಾರೆ. ಈ ಪೋಸ್ಟರ್ ಬಿಡುಗಡೆಯಾದ ಕೆಲವೇ ಸೆಕೆಂಡುಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆದಿಪುರುಷ ಚಿತ್ರದ ಟೀಸರ್ ಅಕ್ಟೋಬರ್ 2 ರಂದು ರಾತ್ರಿ 7.11ಕ್ಕೆ ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಚಿತ್ರವನ್ನು ಸಂಕ್ರಾಂತಿಯ ಉಡುಗೊರೆಯಾಗಿ ಜನವರಿ 12 ರಂದು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಬಾಲಿವುಡ್ ಬೆಡಗಿ ಕೃತಿ ಸನನ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಓಂ ರಾವುತ್  ಬಹಳ ಪ್ರತಿಷ್ಠೆಯಾಗಿ ತೆಗೆದುಕೊಂಡು ನಿರ್ದೇಶಿಸುತ್ತಿರುವುದರಿಂದ, ಈ ಚಿತ್ರವು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಎಂಥ ಸದ್ದು ಮಾಡುತ್ತದೆ ಎಂಬುದನ್ನು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!