ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ಭಾರತೀಯ ಸಿನಿ ಪ್ರೇಕ್ಷಕರು ಕಾಯುತ್ತಿರುವ ಅತಿ ದೊಡ್ಡ ಮಹಾಕಾವ್ಯ ಚಿತ್ರ ʻಆದಿಪುರುಷ್ʼ. ಈ ಸಿನಿಮಾದಲ್ಲಿ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿರುವುದರಿಂದ ಪ್ರಭಾಸ್ನನ್ನು ತೆರೆ ಮೇಲೆ ರಾಮನಾಗಿ ನೋಡಲು ಜನ ಕಾತರರಾಗಿದ್ದಾರೆ.
ಇದೀಗ ಚಿತ್ರತಂಡ ಈ ಚಿತ್ರದ ಟೀಸರ್ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಪೋಸ್ಟರ್ನಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ಗೂಸ್ಬಂಪ್ಸ್ ನೀಡುತ್ತಿದ್ದಾರೆ. ಈ ಪೋಸ್ಟರ್ ಬಿಡುಗಡೆಯಾದ ಕೆಲವೇ ಸೆಕೆಂಡುಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆದಿಪುರುಷ ಚಿತ್ರದ ಟೀಸರ್ ಅಕ್ಟೋಬರ್ 2 ರಂದು ರಾತ್ರಿ 7.11ಕ್ಕೆ ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಚಿತ್ರವನ್ನು ಸಂಕ್ರಾಂತಿಯ ಉಡುಗೊರೆಯಾಗಿ ಜನವರಿ 12 ರಂದು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಬಾಲಿವುಡ್ ಬೆಡಗಿ ಕೃತಿ ಸನನ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಓಂ ರಾವುತ್ ಬಹಳ ಪ್ರತಿಷ್ಠೆಯಾಗಿ ತೆಗೆದುಕೊಂಡು ನಿರ್ದೇಶಿಸುತ್ತಿರುವುದರಿಂದ, ಈ ಚಿತ್ರವು ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಎಂಥ ಸದ್ದು ಮಾಡುತ್ತದೆ ಎಂಬುದನ್ನು ನೋಡಬೇಕಿದೆ.
|| Aarambh ||
Join us as we embark on a magical journey ✨ On the Sarayu River Bank in Ayodhya, UP! #AdipurushInAyodhya
Unveil the first poster and teaser of our film with us on Oct. 2 at 7:11 PM! 🫶#AdipurushTeaser #Adipurush releases IN THEATRES on January 12, 2023 pic.twitter.com/DRd16bonqp
— Adipurush movie (@Offladipurush) September 30, 2022