Friday, December 9, 2022

Latest Posts

ಆರ್ ಎಸ್ ಎಸ್ ಬ್ಯಾನ್ ಮಾಡಬೇಕೆಂಬ ವಾದ ಮೂರ್ಖತನದ ಪರಮಾವಧಿ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ, ಬಾಗಲಕೋಟೆ:
ಆರ್ ಎಸ್ ಎಸ್ ಬ್ಯಾನ್ ಮಾಡಬೇಕೆನ್ನುವ ವಾದ ಮೂರ್ಖತನದ ಪರಮಾವಧಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಆಲಮಟ್ಟಿ ಜಲಾಶಯಕ್ಕೆ ಶುಕ್ರವಾರ ಬಾಗಿನ ಅರ್ಪಿಸಿದ ನಂತರ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹ, ಹವಾಲಾ ದಂಧೆ ಸೇರಿದಂತೆ‌ ಅನೇಕ ದುಷ್ಕೃತ್ಯದಲ್ಲಿ ಭಾಗಿಯಾದ ಸಂಘಟನೆಯನ್ನು ಬ್ಯಾನ್ ಮಾಡಲು‌ ಕೂಗು ಕೇಳಿ ಬಂದಿದ್ದರಿಂದ ಸಾಕ್ಷಾಧಾರ ಇಟ್ಟುಕೊಂಡೇ ದೇಶದ್ರೋಹ ಸಂಘಟನೆ‌ ಪಿಎಫ್‌ಐ ನಿಷೇಧ ಮಾಡಲಾಗಿದೆ ಎಂದು ಹೇಳಿದರು.
ಪಿಎಫ್ ಐ ಸಂಘಟನೆ ಬ್ಯಾನ್ ಆಗಿದ್ದನ್ನು ಸಮರ್ಥ ನೆ ಮಾಡಿಕೊಳ್ಳಲು ಸಾಧ್ಯವಾಗದೆ ತೊಳಲಾಡುತ್ತಿರುವ ಕೆಲವರು ಆರ್ ಎಸ್ ಎಸ್ ಬ್ಯಾನ್ ಮಾಡಿ ಎನ್ನುತ್ತಿರುವುದು ಮೂರ್ಖತನ. ಆರ್ ಎಸ್ ಎಸ್ ಒಂದು ದೇಶಭಕ್ತಿ ಸಂಘಟನೆಯಾಗಿದೆ ಎನ್ನುವ ಮೂಲಕ ಟೀಕಾಕಾರರಿಗೆ ಖಡಕ್‌ ಉತ್ತರ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!