ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾ ವಿರುದ್ಧದ 2 ನೇ ಟಿ20 ಪಂದ್ಯದಲ್ಲಿನ ವಿರಾಟ್ ಕೊಹ್ಲಿ ನಡೆ ಇದೀಗ ಕ್ರೀಡಾಭಿಮಾನಿಗಳಿಗೆ ಮೆಚ್ಚುಗೆಯಾಗಿದೆ. ಹೌದು. ಕಿಂಗ್ ಕೊಹ್ಲಿಗೆ ತನಗೆ ದಾಖಲೆಗಳು ಮುಖ್ಯವಲ್ಲ, ಭಾರತದ ಗೆಲುವು ಮುಖ್ಯ ಎಂಬ ಮಾತು ಎಲ್ಲೆಡೆ ವೈರಲ್ ಆಗಿದ್ದು, ಎಲ್ಲರು ಖುಷಿಪಟ್ಟಿದ್ದಾರೆ.
ದಕ್ಷಿಣ ಆಫ್ರಿಕ ವಿರುದ್ಧದ 2 ನೇ ಟಿ20 ಪಂದ್ಯದಲ್ಲಿ ವಿರಾಟ್ ಭ49 ರನ್ ಗಳಿಸಿದ್ದರು. ಫಿಫ್ಟಿಗೆ 1 ರನ್ ಅಗತ್ಯವಿದ್ದಾಗ ಕಾರ್ತಿಕ್ ಸ್ಟ್ರೈಕ್ ನೀಡಲು ಕೇಳಿದ ಮಾತನ್ನು ತಿರಸ್ಕರಿಸಿದ್ದಾರೆ.
ವಿರಾಟ್ಗೆ ದಾಖಲೆಗಳು ಹೊಸದಲ್ಲ. ಆದರೆ ವೈಯಕ್ತಿಕ ಆಟಕ್ಕಿಂತ ತಂಡಕ್ಕಾಗಿ ಆಡಬೇಕೆಂಬ ಬದ್ಧತೆ ಮೆಚ್ಚುಗೆಗೆ ಕಾರಣವಾಗಿದೆ.
ಕೊಹ್ಲಿ 28 ಎಸೆತಗಳಲ್ಲಿ 49 ರನ್ಗಳು ದಾಖಲಾಗಿದ್ದವು. ಇನಿಂಗ್ಸ್ ಮುಗಿಯಲು ಒಂದು ಓವರ್ ಬಾಕಿ ಇತ್ತು. ಕೊಹ್ಲಿ ಅರ್ಧಶತಕಕ್ಕೆ ಬೇಕಿದ್ದುದು ಕೂಡ ಒಂದು ರನ್. ಈ ವೇಳೆ ಇನ್ನೊಂದು ತುದಿಯಲ್ಲಿದ್ದ ದಿನೇಶ್ ಕಾರ್ತಿಕ್ ಆಡಿದ ಮೊದಲ ನಾಲ್ಕು ಎಸೆತಗಳಲ್ಲಿ 1 ಸಿಕ್ಸರ್, 1 ಬೌಂಡರಿ ಚಚ್ಚಿದರು. ಬಳಿಕ ಇನ್ನೆರಡು ಎಸೆತ ಬಾಕಿ ಇದ್ದಾಗ ವಿರಾಟ್ ಬಳಿಕ ಬಂದ ಕಾರ್ತಿಕ್ ಕೊನೆಯ ಬಾಲ್ ಸ್ಟ್ರೈಕ್ ನೀಡುವುದಾಗಿ ಹೇಳಿದರು. ತಕ್ಷಣವೇ ಇದನ್ನು ತಿರಸ್ಕರಿಸಿದ ವಿರಾಟ್ ‘ಆಟವನ್ನು ನೀನೇ ಮುಗಿಸು’ ಎಂಬಂತೆ ಸೂಚಿಸಿ ಅಲ್ಲಿಂದ ತೆರಳಿದರು.
ಈ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ‘ಗುವಾಹಟಿ ಪಂದ್ಯದಲ್ಲಿ ರನ್ ಮಳೆಯ ಬಳಿಕ ಕಂಡುಬಂದ ವಿಶೇಷ ಕ್ಷಣ’ ಎಂದು ಬರೆದುಕೊಂಡಿದೆ.
In addition to the run fest, a special moment as we sign off from Guwahati. ☺️#TeamIndia | #INDvSA | @imVkohli | @DineshKarthik pic.twitter.com/SwNGX57Qkc
— BCCI (@BCCI) October 2, 2022
ಈ ಮೂಲಕ ವಿರಾಟ್ ಕೊಹ್ಲಿ ತಾನು ಎಂದಿಗೂ ವೈಯಕ್ತಿಕ ದಾಖಲೆಗಾಗಿ ಆಡುವವನಲ್ಲ ಎಂಬುದನ್ನು ತೋರಿಸಿಕೊಟ್ಟರು. ಕಾರ್ತಿಕ್ ಕೂಡ 5ನೇ ಬೌಲ್ ಅನ್ನು ಸಿಕ್ಸರ್ಗೆ ಅಟ್ಟಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಕೊನೆಗೆ ವಿರಾಟ್ ಕೊಹ್ಲಿಗೆ ಸ್ಟ್ರೈಕ್ ಸಿಗದೆ 1 ರನ್ನಿಂದ ಅರ್ಧಶತಕ ದಾಖಲಿಸುವ ಅವಕಾಶ ಕೈ ತಪ್ಪಿತು.