ಸ್ಟ್ರೈಕ್​ ಕೊಡ್ತೀನಿ ಫಿಫ್ಟಿ ಮಾಡು ಎಂದ ಕಾರ್ತಿಕ್ ಗೆ ಕೊಹ್ಲಿಯ ಕೊಟ್ಟ ಉತ್ತರವೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಆಫ್ರಿಕಾ ವಿರುದ್ಧದ 2 ನೇ ಟಿ20 ಪಂದ್ಯದಲ್ಲಿನ ವಿರಾಟ್​ ಕೊಹ್ಲಿ ನಡೆ ಇದೀಗ ಕ್ರೀಡಾಭಿಮಾನಿಗಳಿಗೆ ಮೆಚ್ಚುಗೆಯಾಗಿದೆ. ಹೌದು. ಕಿಂಗ್​ ಕೊಹ್ಲಿಗೆ ತನಗೆ ದಾಖಲೆಗಳು ಮುಖ್ಯವಲ್ಲ, ಭಾರತದ ಗೆಲುವು ಮುಖ್ಯ ಎಂಬ ಮಾತು ಎಲ್ಲೆಡೆ ವೈರಲ್ ಆಗಿದ್ದು, ಎಲ್ಲರು ಖುಷಿಪಟ್ಟಿದ್ದಾರೆ.

ದಕ್ಷಿಣ ಆಫ್ರಿಕ ವಿರುದ್ಧದ 2 ನೇ ಟಿ20 ಪಂದ್ಯದಲ್ಲಿ ವಿರಾಟ್​ ಭ49 ರನ್​ ಗಳಿಸಿದ್ದರು. ಫಿಫ್ಟಿಗೆ 1 ರನ್​ ಅಗತ್ಯವಿದ್ದಾಗ ಕಾರ್ತಿಕ್​ ಸ್ಟ್ರೈಕ್​ ನೀಡಲು ಕೇಳಿದ ಮಾತನ್ನು ತಿರಸ್ಕರಿಸಿದ್ದಾರೆ.

ವಿರಾಟ್​ಗೆ ದಾಖಲೆಗಳು ಹೊಸದಲ್ಲ. ಆದರೆ ವೈಯಕ್ತಿಕ ಆಟಕ್ಕಿಂತ ತಂಡಕ್ಕಾಗಿ ಆಡಬೇಕೆಂಬ ಬದ್ಧತೆ ಮೆಚ್ಚುಗೆಗೆ ಕಾರಣವಾಗಿದೆ.

ಕೊಹ್ಲಿ 28 ಎಸೆತಗಳಲ್ಲಿ 49 ರನ್​ಗಳು ದಾಖಲಾಗಿದ್ದವು. ಇನಿಂಗ್ಸ್​ ಮುಗಿಯಲು ಒಂದು ಓವರ್​ ಬಾಕಿ ಇತ್ತು. ಕೊಹ್ಲಿ ಅರ್ಧಶತಕಕ್ಕೆ ಬೇಕಿದ್ದುದು ಕೂಡ ಒಂದು ರನ್​. ಈ ವೇಳೆ ಇನ್ನೊಂದು ತುದಿಯಲ್ಲಿದ್ದ ದಿನೇಶ್​ ಕಾರ್ತಿಕ್​​ ಆಡಿದ ಮೊದಲ ನಾಲ್ಕು ಎಸೆತಗಳಲ್ಲಿ 1 ಸಿಕ್ಸರ್​, 1 ಬೌಂಡರಿ ಚಚ್ಚಿದರು. ಬಳಿಕ ಇನ್ನೆರಡು ಎಸೆತ ಬಾಕಿ ಇದ್ದಾಗ ವಿರಾಟ್​ ಬಳಿಕ ಬಂದ ಕಾರ್ತಿಕ್​ ಕೊನೆಯ ಬಾಲ್​ ಸ್ಟ್ರೈಕ್​ ನೀಡುವುದಾಗಿ ಹೇಳಿದರು. ತಕ್ಷಣವೇ ಇದನ್ನು ತಿರಸ್ಕರಿಸಿದ ವಿರಾಟ್​ ‘ಆಟವನ್ನು ನೀನೇ ಮುಗಿಸು’ ಎಂಬಂತೆ ಸೂಚಿಸಿ ಅಲ್ಲಿಂದ ತೆರಳಿದರು.
ಈ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದೆ.  ‘ಗುವಾಹಟಿ ಪಂದ್ಯದಲ್ಲಿ ರನ್​ ಮಳೆಯ ಬಳಿಕ ಕಂಡುಬಂದ ವಿಶೇಷ ಕ್ಷಣ’ ಎಂದು ಬರೆದುಕೊಂಡಿದೆ.

 

ಈ ಮೂಲಕ ವಿರಾಟ್​ ಕೊಹ್ಲಿ ತಾನು ಎಂದಿಗೂ ವೈಯಕ್ತಿಕ ದಾಖಲೆಗಾಗಿ ಆಡುವವನಲ್ಲ ಎಂಬುದನ್ನು ತೋರಿಸಿಕೊಟ್ಟರು. ಕಾರ್ತಿಕ್​ ಕೂಡ 5ನೇ ಬೌಲ್​ ಅನ್ನು ಸಿಕ್ಸರ್​ಗೆ ಅಟ್ಟಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಕೊನೆಗೆ ವಿರಾಟ್​ ಕೊಹ್ಲಿಗೆ ಸ್ಟ್ರೈಕ್ ಸಿಗದೆ 1 ರನ್​ನಿಂದ ಅರ್ಧಶತಕ ದಾಖಲಿಸುವ ಅವಕಾಶ ಕೈ ತಪ್ಪಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!