ಹೊಸದಿಗಂತ ಡಿಜಿಟಲ್ ಡೆಸ್ಕ್
ಕೊರೋನಾದಿಂದ ಗುಣಮುಖರಾಗಿ ಫಿಟ್ನೆಸ್ ಸಾಬೀತಾದರೆ ಮೊಹಮ್ಮದ್ ಶಮಿ ಅವರನ್ನು ಟಿ20 ವಿಶ್ವಕಪ್ ಗೆ ಆಯ್ಕೆ ಮಾಡಲಾಗುವುದು ಎಂದು ಭಾರತದ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ದೀಪಕ್ ಚಹಾರ್ ಜೊತೆಗೆ ಮೊಹಮ್ಮದ್ ಶಮಿ ವಿಶ್ವಕಪ್ ತಂಡದ ಮೀಸಲು ಆಟಗಾರರ ಪಟ್ಟಿಯಲ್ಲಿ ಇದ್ದಾರೆ. ಬುಮ್ರಾ ಬದಲಿ ಯಾರನ್ನು ಆಡಿಸಬೇಕು ಎಂಬುದಕ್ಕೆ ಅಕ್ಟೋಬರ್ 15ರ ವರೆಗೂ ಅವಕಾಶ ಇದೆ. ಆದರೆ ಶಮಿ ಕೋವಿಡ್ಗೆ ಒಳಗಾದ ಕಾರಣ ಎನ್ಸಿಎ ನೀಡುವ ವರದಿಯನ್ನು ಆಧರಿಸಿ ಆಯ್ಕೆ ಕಾಯ್ದಿರಿಸಲಾಗಿದೆ.
ಬುಮ್ರಾ ಅನುಪಸ್ಥಿತಿಯಲ್ಲಿ ಭಾರತಕ್ಕೆ ಉತ್ತಮ ವೇಗಿಯ ಅಗತ್ಯತೆ ಇದೆ. ಹೋಮ್ ಸೀರೀಸ್ನಲ್ಲಿ ಡೆತ್ ಓವರ್ಗಳಲ್ಲಿ ನಿಯಂತ್ರಣ ಸಾಧಿಸುವಲ್ಲಿ ಭಾರತೀಯ ಬೌಲರ್ಗಳು ವಿಫಲರಾಗಿದ್ದಾರೆ. ಹೀಗಾಗಿ ಅನುಭವಿ ಮತ್ತು ಡೆತ್ ಓವರ್ಗಳಲ್ಲಿ ನಿಯಂತ್ರಣ ಸಾಧಿಸುವ ಬೌಲರ್ಗಳ ಅವಶ್ಯಕತೆ ಇದೆ.
ಭಾರತ ತಂಡ ನಾಳೆ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದೆ. ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಆಡಲಿದೆ.