ಹಬ್ಬಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಆದರೆ ಆಧುನಿಕತೆ ನಂತರ ಹಬ್ಬಗಳನ್ನು ಆಚರಿಸುವವರ ಸಂಖ್ಯೆ ಕಡಿಮೆಯಾಗಿದೆ. ತಮ್ಮ ಕೆಲಸಗಳು, ಕಮಿಟ್ಮೆಂಟ್ ಮಧ್ಯೆ ಹಬ್ಬಗಳ ಆಚರಣೆ ಮರೆತೇ ಹೋಗಿದೆ. ಹಬ್ಬಗಳನ್ನು ಯಾಕೆ ಮಾಡಬೇಕು? ಇಲ್ಲಿದೆ ಕೆಲ ಅಂಶಗಳು
- ನಮ್ಮ ಸಂಸ್ಕೃತಿ, ಸಂಪ್ರದಾಯ ಉಳಿಯುವಲ್ಲಿ ಸಹಾಯವಾಗುತ್ತದೆ
- ಮನಸ್ಸಿಗೆ ಶಾಂತಿ
- ಮುಂದಿನ ಪೀಳಿಗೆಗೆ ಒಗ್ಗಟ್ಟು ತಿಳಿಸಲು
- ಸಂಬಂಧ ವೃದ್ಧಿ
- ಬೇರೆ ಬೇರೆ ಧರ್ಮಗಳ ಬಗ್ಗೆ ಆಚರಣೆಗಳ ಬಗ್ಗೆ ಮಾಹಿತಿ
- ಕುಟುಂಬ ಹಾಗೂ ಸ್ನೇಹಿತರ ಜೊತೆ ಸಮಯ ಕಳೆಯಲು ಸಾಧ್ಯವಾಗುತ್ತದೆ
- ಕೆಲಸದ ಒತ್ತಡದ ಮಧ್ಯೆ ಬ್ರೇಕ್
- ಒಂದೇ ನಾರ್ಮಲ್ ರೊಟೀನ್ನಿಂದ ಮುಕ್ತಿ
- ಮನೆಮಂದಿಯೆಲ್ಲಾ ಖುಷಿಯಾಗಿ ಕೂರುವ ಸಮಯ
- ಅಕ್ಕಪಕ್ಕದ ಮನೆಯವರನ್ನೂ ಪರಿಚಯ ಮಾಡಿಕೊಳ್ಳಲು ಸುಸಮಯ
- ಮನುಷ್ಯರ ನಡುವೆ ಬಾಂಧವ್ಯ ಬೆಸೆಯುತ್ತದೆ
- ಮನೆಯಲ್ಲಿ ಖುಷಿ ತುಂಬಿ ಹರಿಯುತ್ತದೆ
- ಒಂದೇ ರೀತಿ ಊಟ ತಿಂಡಿಯಿಂದ ಬ್ರೇಕ್