ಹಾವೇರಿಯಲ್ಲಿ ಸಂಭ್ರಮದ ಕೊಬ್ಬರಿ ಹೋರಿ ಬೆದರಿಸುವ ಹಬ್ಬ

ಹೊಸದಿಗಂತ ವರದಿ ಹಾವೇರಿ :

ಹಾವೇರಿ ಜಿಲ್ಲೆಯ ಹಲವೆಡೆ ದೀಪಾವಳಿ ಪ್ರಯುಕ್ತ ಕೊಬ್ಬರಿ ಹೋರಿ ಬೆದರಿಸುವ ಹಬ್ಬವನ್ನು ಆಚರಿಸಲಾಯಿತು. ಜಿಲ್ಲಾ ಕೇಂದ್ರ ಹಾವೇರಿಯ ವೀರಭದ್ರೇಶ್ವರ ದೇವಸ್ಥಾನದ ಬಳಿ ಬೇಳಿಗ್ಗೆ ಹನ್ನೊಂದು ಗಂಟೆಯಿಂದ ಪ್ರಾರಂಭವಾದ ಹಬ್ಬದಲ್ಲಿ ಅಷ್ಟಾಗಿ ಹೋರಿಗಳು ಭಾಗವಹಿಸಿರಲಿಲ್ಲ.ಆದರೆ ಸಮಯ ಹನ್ನೆರಡು ಗಂಟೆ ಆದಂತೆ ಹೋರಿಗಳ ಸಂಖ್ಯೆ ಹೆಚ್ಚಾಗುತ್ತ ಸಾಗಿತು.
ಗೋರಿಗಳ ಸಂಖ್ಯೆ ಹೆಚ್ಚಾದಂತೆ ಹೋರಿಗಳನ್ನು ಹಿಡಿಯುವ ಯುವಕರ ಸಂಖ್ಯೆಯೂ ಹೆಚ್ಚಾಗತೊಡಗಿತು.

ಪ್ರವೇಶ ದ್ವಾರದಿಂದ ಹೋರಿಗಳು ಚಿನ್ನಾಟ ಕಟೆಯುತ್ತ ಬರುತ್ತಿದ್ದರೆ ಯುವಕರು ಹೋರಿಗಳಿಗೆ ಕಟ್ಟಿದ್ದ ಕೊಬ್ಬರಿ, ಕೋಡಬಳೆ ಸೇರಿದಂತೆ ಇತರೆ ತಿನಿಸಿನ ಪದಾರ್ಥಗಳನ್ನು ಕೀಳುವುದಕ್ಕೆ ಮತ್ತು ಓಡುತ್ತಿರುವ ಹೋರಿಯನ್ನು ತಡೆದು ನಿಲ್ಲಿಸುವುದಕ್ಕೆ ಬೆನ್ನಟ್ಟಿ ಬರಿತ್ತಿರುವ ದೃಶ್ಯ ನೋಡಲು ಬಂದ ಜನತೆಯನ್ನು ಅದರಲ್ಲೂ ವಿಶೇಷವಾಗಿ ಯುವ ಸಮೂಹವನ್ನು ರೋಮಾಂಚನ ಗೊಳಿಸಿ ಕೇಕೆ ಹೊಡೆಯುವಂತೆ ಮಾಡುತ್ತಿತ್ತು.

ಕೊಬ್ಬರಿ ಹೋರಿ ಬೆದರಿಸುವುದನ್ನು ನೋಡಲು ಬಂದಿದ್ದ ಸಾವಿರಾರು ಜನತೆ ಹೋರಿಯನ್ಮು ಹಿಡಿ ಹಿಡಿ ಎಂದು ಕೇಕೆ ಹಾಕಿ ಹುರಿದುಂಬಿಸುವ ಕೆಲಸವನ್ನು ಮಾಡುತ್ತಿದ್ದರು. ಹೋರಿ ಕೈಗೆ ಸಿಗದೇ ಸೀಮಾ ರೇಖೆಯನ್ನು ದಾಟಿ ಮುನ್ನಡೆದರೆ ಆ ಹೋರಿಯ ಹೇಸರನ್ನು ಹೇಳಿ ಕೇಕೆ ಹಾಕುತ್ತಿದ್ದರೆ. ಆ ಹೋರಿಯ ಮಾಲೀಕರು ಮತ್ತು ಅದರೊಂದಿಗೆ ಬಂದಿದಗದ ಜನತೆ ಹೋರಿಯ ಹಿಂದೆ ಕೇಕೆ ಹಾಕುತ್ತ ಬಾವುಟವನ್ನು ಹಾರಿಸುತ್ತ ಓಡುತ್ತಿರುವ ದೃಶ್ಯ ಸಾನ್ಯವಾಗಿತ್ತು.

ಹಾವೇರಿ ತಾಲೂಕಿನ ದೇವಿಹೊರ ಗ್ರಾಮದಲ್ಲಿಯೂ ಇಂದು ಕೊಬ್ಬರಿ ಹೋರಿ ಬೆದರಿಸುವ ಹಬ್ಬವನ್ನು ಆಚರಿಸಲಾಯಿತು.

ಹಾವೇರಿ ಮತ್ತು ಜಿಲ್ಲೆಯ ಇತರೆಡೆಗಳಲ್ಲಿ ಆಚರಿಸಲಾದ ಕೊಬ್ಬರಿ ಬೆದರಿಸುವ ಸ್ಪರ್ಧೆಯನ್ನು ವೀಕ್ಷಿಸುವುದಕ್ಕೆ ಸುತ್ತಲಿನ ಹತ್ತಾರು ಗ್ರಾಮಗಳಿಂದ ಜನತೆ ಆಗಮಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!