ಸ್ಟ್ರಾಬೆರಿ ಹುಳಿ, ಸ್ಟ್ರಾಬೆರಿ ವರ್ಷವಿಡೀ ಸಿಗುತ್ತದೆ, ಸ್ಟ್ರಾಬೆರಿ ತಿಂದರೆ ಬೇರೆ ಹಣ್ಣುಗಳನ್ನು ತಿಂದಷ್ಟು ಸಮಾಧಾನ ಆಗೋದಿಲ್ಲ ಅನ್ನೋರು ಖಂಡಿತಾ ಇದನ್ನು ಓದಿ, ಸೀಸನ್ನಲ್ಲಿ ಯಾವ ಹಣ್ಣು ಬರುತ್ತದೋ ಅದನ್ನು ತಿಂದುಬಿಡಬೇಕು. ಇದೀಗ ಸ್ಟ್ರಾಬೆರಿ ಸೀಸನ್ ಇಷ್ಟಬಂದಷ್ಟು ಸ್ಟ್ರಾಬೆರಿ ತಿಂದುಬಿಡಿ ಯಾಕೆ ಗೊತ್ತಾ?
ಎಲ್ಲಾ ರೀತಿಯ ಕ್ಯಾನ್ಸರ್ನಿಂದ ನಿಮ್ಮನ್ನು ದೂರ ಇಡೋಕೆ ಇದು ಸಹಾಯ ಮಾಡುತ್ತದೆ.
ಪ್ರತಿ ದಿನ ಯಾವುದೇ ಸಮಸ್ಯೆಯಿಲ್ಲದೆ ಮಲವಿಸರ್ಜನೆ ಮಾಡೋಕೆ ಫೈಬರ್ ಉಳ್ಳ ಈ ಹಣ್ಣು ಸಹಾಯ ಮಾಡುತ್ತದೆ.
ಚೂರೇ ತಿಂದೆ ಆದರೂ ಹೊಟ್ಟೆ ಊದಿಕೊಂಡಿದೆ ಎನಿಸುತ್ತಾ? ಬ್ಲೋಟಿಂಗ್ ಸಮಸ್ಯೆ ಇರುವವರೂ ಸ್ಟ್ರಾಬೆರಿ ತಿನ್ನಿ
ರೋಗನಿರೋಧಕ ಶಕ್ತಿಗಾಗಿ ಎಷ್ಟೆಲ್ಲಾ ಕಷ್ಟಪಡುತ್ತೀರಿ. ಅದರ ಬದಲು ಈ ಹಣ್ಣು ತಿನ್ನಿ
ನಿಮ್ಮ ಮೆದುಳು ಚುರುಕಾಬೇಕಾ? ಮಕ್ಕಳನ್ನು ಚುರುಕು ಮಾಡಬೇಕು ಎಂದುಕೊಂಡ ಪೋಷಕರು ಕೂಡ ಮಕ್ಕಳಿಗೆ ಸ್ಟ್ರಾಬೆರಿ ನೀಡಬಹುದು.
ಸಿಹಿ ತಿನ್ನಬೇಕು ಅನ್ನೋ ಕ್ರೇವಿಂಗ್ಸ್ ಇದೆಯಾ? ಸಿಹಿ ತಿನ್ನೋದಾದ್ರೆ ಸ್ಟ್ರಾಬೆರಿ ತಿನ್ನಿ, ಇದು ನಿಮ್ಮ ಸಿಹಿ ಕ್ರೇವಿಂಗ್ಸ್ ದೂರ ಮಾಡುತ್ತದೆ.
ಸಣ್ಣ ಆಗಬೇಕಾ? ಹಾಗಿದ್ರೆ ಈ ಹಣ್ಣು ತಿನ್ನೋಕೆ ಮರೆಯಬೇಡಿ. ಇದರಲ್ಲಿನ ಫೈಬರ್ ನಿಮ್ಮ ಕ್ಯಾಲೋರಿ ಇನ್ಟೇಕ್ ಕಡಿಮೆ ಮಾಡುತ್ತದೆ.
ಗರ್ಭಿಣಿಯರು ಹೆಚ್ಚು ಸ್ಟ್ರಾಬೆರಿ ತಿನ್ನುವುದರಿಂದ ಮಕ್ಕಳು ಯಾವುದೇ ನ್ಯೂನತೆ ಇಲ್ಲದೆ ಹುಟ್ಟುವಂತೆ ನೋಡಿಕೊಳ್ಳುತ್ತದೆ.