ಶಾಕಿಂಗ್ ವಿಡಿಯೋ| ಪೋಷಕರೇ ಹುಷಾರಾಗಿರಿ, ಮಗುವಿನ ಕೆಲಸಕ್ಕೆ ಸ್ಕೂಟಿಯಿಂದ ಬಿದ್ದ ತಂದೆ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ಘಟನೆ ಪಾಲಕರು ಹಾಗೂ ಹಿರಿಯರಿಗೆ ಎಚ್ಚರಿಕೆಯಂತಿದೆ. ಮಕ್ಕಳನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗುವಾಗ ತುಂಬಾ ಎಚ್ಚರಿಕೆ ವಹಿಸಿ ಎಂದು ಹೇಳುವ ಘಟನೆ ಇದು. ಯಾವುದೇ ನಿರ್ಲಕ್ಷ್ಯಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ನಡೆದ ಆಘಾತಕಾರಿ ಘಟನೆಯೇ ಇದಕ್ಕೆ ಸಾಕ್ಷಿ.

ಮಹಾರಾಷ್ಟ್ರದ ಸಿಂಧು ದುರ್ಗದಲ್ಲಿ ವ್ಯಕ್ತಿಯೊಬ್ಬ ತನ್ನ ಮನೆಯ ಮುಂದೆ ಸ್ಕೂಟಿ ಮೇಲೆ ಮಗು ನಿಲ್ಲಿಸಿಕೊಂಡು ಫೋನ್‌ನಲ್ಲಿ ಮಾತನಾಡುತ್ತಿದ್ದಾನೆ. ಮುಂದೆ ಕುಳಿತ ಮಗು ಎಕ್ಸಲೇಟರ್ ಏರಿಸಿದ್ದಾನೆ. ಇದ್ದಕ್ಕಿದ್ದಂತೆ ನಿಂತಿದ್ದ ಸ್ಕೂಟಿ ನಿಯಂತ್ರಣ ತಪ್ಪಿ ಮುಂದಕ್ಕೆ ಚಲಿಸಿದೆ. ಹಿಂದೆ ಕುಳಿತಿದ್ದ ತಂದೆ ಎಗರಿ ಕೆಳಗೆ ಬಿದ್ದದ್ದಾನೆ. ಸ್ಕೂಟಿ ಮೇಲಿದ್ದ ಬಾಲಕ ಕೂಡ ಕೆಳಗೆ ಬಿದ್ದನು. ಗಾಡಿಯ ಮೇಲಿನಿಂದ ಬಿದ್ದು ತಂದೆ ಗಾಯಗೊಂಡಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಕ್ಕಳನ್ನು ಗಾಡಿಯಲ್ಲಿ ಕರೆದುಕೊಂಡು ಹೋಗುವಾಗ ತುಂಬಾ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಇಂತಹ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!