ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಟಿ20 ವಿಶ್ವಕಪ್ ಪಂದ್ಯಾಟದಲ್ಲಿ ಇಂದು ಭಾರತದ ಬಲಿಷ್ಟ ಮಹಿಳೆಯರ ತಂಡವು ಪಾಕಿಸ್ತಾನ ಮಹಿಳೆಯರ ತಂಡದೊಂದಿಗೆ ಸೆಣೆಸಲಿದೆ. ಪ್ರಶಸ್ತಿ ಗೆಲ್ಲುವ ಕನಸಿನೊಂದಿಗೆ ಭಾರತದ ವನಿತೆಯರು ಇಂದು ಸಾಂಪ್ರದಾಯಕ ವೈರಿ ಪಾಕಿಸ್ತಾನದೊಂದಿಗೆ ಆಟವಾಡಲಿದ್ದು ದಕ್ಷಿಣ ಆಫ್ರಿಕೆಯ ಕೇಪ್ಟೌನ್ ನ ನ್ಯೂಲ್ಯಾಂಡ್ಸ್ ಕ್ರಿಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಹರ್ಮನ್ ಪ್ರೀತ್ ಕೌರ್ ನೇತೃತ್ವದಲ್ಲಿ ಭಾರತೀಯ ಮಹಿಳೆಯರು ಶುಭಾರಂಭ ಮಾಡಲು ಸಜ್ಜಾಗಿದ್ದಾರೆ. ಮತ್ತೊಂದೆಡೆ ಈವರೆಗಿನ ಎಲ್ಲಾ ಪಂದ್ಯಾಟಗಳಲ್ಲಿ ಮೊದಲ ಸುತ್ತಲ್ಲೇ ಸೋತು ಹೊರಬಿದ್ದಿದ್ದ ಪಾಕ್ ಈ ಬಾರಿ ನಾಕೌಟ್ಗೇರುವ ನಿರೀಕ್ಷೆಯಲ್ಲಿದ್ದು, ಜಯದೊಂದಿಗೆ ಟೂರ್ನಿಗೆ ಕಾಲಿಡಲು ಎದುರು ನೋಡುತ್ತಿದೆ. ಭಾರತದ ತಂಡದಲ್ಲಿ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧನಾ ಗಾಯಗೊಂಡಿದ್ದು, ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಅಂಡರ್-19 ವಿಶ್ವಕಪ್ ವಿಜೇತ ತಂಡದ ನಾಯಕಿ ಶಫಾಲಿ ವರ್ಮಾ, ಜೆಮಿಮಾ, ದೀಪ್ತಿ ಶರ್ಮಾ, ರೇಣುಕಾ ಸಿಂಗ್ ಸೇರಿದಂತೆ ಪ್ರಮುಖ ಆಟಗಾರರಿದ್ದಾರೆ.
ಸಂಜೆ 6.30ಕ್ಕೆ ಪಂದ್ಯ ಆರಂಭವಾಗಲಿದ್ದು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರವಾಗಲಿದೆ.