Friday, March 31, 2023

Latest Posts

ಐಸಿಸಿ ಮಹಿ​ಳಾ ಟಿ20 ವಿಶ್ವ​ಕಪ್‌: ಇಂದು ಪಾಕಿಸ್ತಾನದೊಂದಿಗೆ ಸೆಣೆಸಲಿದೆ ಭಾರತ ವನಿತೆಯರ ತಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಿಳಾ ಟಿ20 ವಿಶ್ವಕಪ್‌ ಪಂದ್ಯಾಟದಲ್ಲಿ ಇಂದು ಭಾರತದ ಬಲಿಷ್ಟ ಮಹಿಳೆಯರ ತಂಡವು ಪಾಕಿಸ್ತಾನ ಮಹಿಳೆಯರ ತಂಡದೊಂದಿಗೆ ಸೆಣೆಸಲಿದೆ. ಪ್ರಶಸ್ತಿ ಗೆಲ್ಲುವ ಕನಸಿನೊಂದಿಗೆ ಭಾರತದ ವನಿತೆಯರು ಇಂದು ಸಾಂಪ್ರದಾಯಕ ವೈರಿ ಪಾಕಿಸ್ತಾನದೊಂದಿಗೆ ಆಟವಾಡಲಿದ್ದು ದಕ್ಷಿಣ ಆಫ್ರಿಕೆಯ ಕೇಪ್‌ಟೌನ್ ನ ನ್ಯೂಲ್ಯಾಂಡ್ಸ್‌ ಕ್ರಿಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಹರ್ಮನ್‌ ಪ್ರೀತ್ ಕೌರ್‌ ನೇತೃತ್ವದಲ್ಲಿ ಭಾರತೀಯ ಮಹಿಳೆಯರು ಶುಭಾರಂಭ ಮಾಡಲು ಸಜ್ಜಾಗಿದ್ದಾರೆ. ಮತ್ತೊಂದೆಡೆ ಈವ​ರೆ​ಗಿನ ಎಲ್ಲಾ ಪಂದ್ಯಾಟಗಳಲ್ಲಿ ಮೊದಲ ಸುತ್ತಲ್ಲೇ ಸೋತು ಹೊರ​ಬಿ​ದ್ದಿದ್ದ ಪಾಕ್‌ ಈ ಬಾರಿ ನಾಕೌಟ್‌ಗೇರು​ವ ನಿರೀ​ಕ್ಷೆ​ಯ​ಲ್ಲಿದ್ದು, ಜಯ​ದೊಂದಿಗೆ ಟೂರ್ನಿಗೆ ಕಾಲಿ​ಡಲು ಎದುರು ನೋಡುತ್ತಿದೆ. ಭಾರ​ತದ ತಂಡದಲ್ಲಿ ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂಧನಾ ಗಾಯ​ಗೊಂಡಿದ್ದು, ಈ ಪಂದ್ಯ​ಕ್ಕೆ ಅಲ​ಭ್ಯ​ರಾ​ಗ​ಲಿ​ದ್ದಾರೆ. ಅಂಡ​ರ್‌-19 ವಿಶ್ವ​ಕಪ್‌ ವಿಜೇತ ತಂಡದ ನಾಯಕಿ ಶಫಾಲಿ ವರ್ಮಾ, ಜೆಮಿಮಾ, ದೀಪ್ತಿ ಶರ್ಮಾ, ರೇಣುಕಾ ಸಿಂಗ್‌ ಸೇರಿ​ದಂತೆ ಪ್ರಮುಖ ಆಟ​ಗಾ​ರ​ರಿ​ದ್ದಾರೆ.

ಸಂಜೆ 6.30ಕ್ಕೆ ಪಂದ್ಯ ಆರಂಭವಾಗಲಿದ್ದು ಸ್ಟಾರ್‌ ಸ್ಪೋರ್ಟ್ಸ್‌ ನಲ್ಲಿ ನೇರಪ್ರಸಾರವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!