ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಅಜ್ಜಿಯ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಲು ಬಂದಿದ್ದ ಖದೀಮನಿಗೆ 10 ವರ್ಷದ ಬಾಲಕಿ ಹಿಗ್ಗಾಮುಗ್ಗಾ ಥಳಿಸಿದ್ದಾಳೆ.
ಮಹಾರಾಷ್ಟ್ರದ ಪುಣೆಯ ಮಾಡೆಲ್ ಕಾಲೋನಿಯಲ್ಲಿ 60 ವರ್ಷದ ಲತಾ ಘಾಗ್, ಮೊಮ್ಮಗಳಾದ ರುತ್ವಿ ಘಾಗ್ ಮನೆಗೆ ತೆರಳುತ್ತಿದ್ದರು. ಈ ವೇಳೆ ಅಜ್ಜಿಯ ಸರಕ್ಕೆ ಕಣ್ಣಿಟ್ಟ ವ್ಯಕ್ತಿಯೊಬ್ಬ ಸ್ಕೂಟಿಯಲ್ಲಿ ಬಂದಿದ್ದಾನೆ.
ದಾರಿ ಕೇಳುವ ನೆಪದಲ್ಲಿ ಗಾಡಿ ನಿಲ್ಲಿಸಿ ಅಜ್ಜಿ ಕತ್ತಿಗೆ ಕೈ ಹಾಕಿದ್ದಾನೆ. ಇದನ್ನು ನೋಡಿದ ಮೊಮ್ಮಗಳು ಕೈಲಿದ್ದ ಬ್ಯಾಗ್ನ್ನು ಬಳಸಿ ಆತನಿಗೆ ಹೊಡೆದು ಕೂಗಿದ್ದಾಳೆ. ಇದರಿಂದ ಗಾಬರಿಯಾದ ಕಳ್ಳ ಓಡಿಹೋಗಿದ್ದಾನೆ.
ಈ ಘಟನೆ ಫೆ.25ರಂದು ನಡೆದಿದ್ದು, ಸಿಸಿಟಿವಿ ಫೂಟೇಜ್ ವೈರಲ್ ಆಗುತ್ತಿದ್ದಂತೆಯೇ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಅಜ್ಜಿ ಮೊಮ್ಮಗಳನ್ನು ಕರೆಸಿ ಮಾತನಾಡಿದ್ದು, ದೂರು ದಾಖಲಿಸಿಕೊಂಡಿದ್ದಾರೆ.
#WATCH | A 10-year-old girl foiled an attempt by a chain snatcher to snatch her grandmother's chain in Maharashtra's Pune City
The incident took place on February 25 & an FIR was registered yesterday after the video of the incident went viral.
(CCTV visuals confirmed by police) pic.twitter.com/LnTur7pTeU
— ANI (@ANI) March 10, 2023