February 15, 2026
Sunday, February 15, 2026
spot_img

ಜಾರ್ಜಿಯಾ ಮೆಲೋನಿ ಆಹ್ವಾನ: ಶೀಘ್ರವೇ ಇಟಲಿಗೆ ಪ್ರಧಾನಿ ಮೋದಿ ಭೇಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2026 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿಗೆ ಭೇಟಿ ನೀಡುವ ನಿರೀಕ್ಷೆಯಿದೆ .

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಟಲಿಯ ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಪರವಾಗಿ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದೇನೆ ಮತ್ತು ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ಹೇಳಿದ್ದಾರೆ.

“ನಾನು ನಮ್ಮ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಪರವಾಗಿ ಮೋದಿ ಅವರನ್ನು ಇಟಾಲಿಗೆ ಆಹ್ವಾನಿಸಿದೆ. ನಾನು ಪ್ರಧಾನಿಯನ್ನು ಇಟಲಿಗೆ ಪ್ರವಾಸಕ್ಕೆ ಆಹ್ವಾನಿಸಿದೆ. 2026 ರಲ್ಲಿ ಅವರು ಇಟಲಿಯಲ್ಲಿ ನಮ್ಮ ದೇಶದಲ್ಲಿರುತ್ತಾರೆ” ಎಂದು ತಜಾನಿ ಹೇಳಿದ್ದಾರೆ.

ಇದೇ ವೇಳೆ ಮೆಲೋನಿ ಅವರ ಭಾರತ ಭೇಟಿಯೂ ಪರಿಗಣನೆಯಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜಿಯೋರ್ಜಿಯಾ ಮೆಲೋನಿ ಅವರ ಭಾರತ ಭೇಟಿಯ ಬಗ್ಗೆ ಕೇಳಿದಾಗ, ಇಬ್ಬರು ನಾಯಕರ ನಡುವಿನ ಹೆಚ್ಚಿನ ಚರ್ಚೆಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಜಾನಿ ಹೇಳಿದ್ದಾರೆ.

ಭಾರತ-ಇಟಲಿ ಸಂಬಂಧಗಳು ಬಲಗೊಳ್ಳುತ್ತಿವೆ ಎಂದು ತಜಾನಿ ಇಟಲಿಯ ದೃಢಪಡಿಸಿದ್ದಾರೆ. ವ್ಯಾಪಾರ, ಮೂಲಸೌಕರ್ಯ ಮತ್ತು ಕಾರ್ಯತಂತ್ರದ ಸಹಯೋಗವನ್ನು ಒಳಗೊಂಡ ಭಾರತ- ಇಟಾಲಿ ಸಂಬಂಧಗಳು ಬಲವಾದ ಮೇಲ್ಮುಖ ಪಥದಲ್ಲಿವೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !