ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಸಿರು ಮರಗಳು… ಆಳವಾದ ಕಣಿವೆಗಳು… ಎತ್ತರದ ಬೆಟ್ಟಗಳು… ಹಿಮಾಚ್ಛಾದಿತ ಪರ್ವತಗಳ ಸೊಬಗಿಗೆ ವಿಶ್ವ ಸುಂದರಿ ಕರೋಲಿನಾ ಬಿಲಾವ್ಸ್ಕಾ ಮಾರು ಹೋಗಿದ್ದಾರೆ. ಇವರ ಜೊತೆಗೆ ಇತರ ಅನೇಕ ಸುಂದರಿಯರು ಕಾಶ್ಮೀರ ಕಣಿವೆಯ ನೈಸರ್ಗಿಕ ಸೌಂದರ್ಯವನ್ನು ಆನಂದಿಸಿದ್ದಾರೆ.
ಮಿಸ್ ವರ್ಲ್ಡ್ 2023 ರ ಪೂರ್ವ ಕಾರ್ಯಕ್ರಮವು ಶ್ರೀನಗರದಲ್ಲಿ ನಡೆಯಿತು. ಮಿಸ್ ವರ್ಲ್ಡ್ ಜೊತೆಗೆ ಮಿಸ್ ವರ್ಲ್ಡ್ ಕೆರಿಬಿಯನ್, ಎಮ್ಮಿ ಪೆನಾ, ವಿಶ್ವ ಸುಂದರಿ ಅಮೇರಿಕಾ ಶ್ರೀ ಸೈನಿ, ಮಿಸ್ ವರ್ಲ್ಡ್ ಇಂಡಿಯಾ ಸಿನಿ ಶೆಟ್ಟಿ, ವಿಶ್ವ ಸುಂದರಿ ಇಂಗ್ಲೆಂಡ್ ಜೆಸ್ಸಿಕಾ ಗ್ಯಾಗೆನ್, ಏಷ್ಯಾ ಸುಂದರಿ ಪ್ರಿಸ್ಸಿಲ್ಲಾ ಕಾರ್ಲಾ ಸಪುತ್ರಿ ಯೂಲ್ಸ್ ಕಾಶ್ಮೀರ ಪ್ರವಾಸ ಮಾಡಿದರು. ಈ ಪ್ರವಾಸದಲ್ಲಿ ಮಿಸ್ ವರ್ಲ್ಡ್ ಆರ್ಗನೈಸೇಶನ್ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಎರಿಕ್ ಮೊರ್ಲೆ ಕೂಡ ಭಾಗವಹಿಸಿದ್ದರು.
ವಿಶ್ವವಿಖ್ಯಾತ ದಾಲ್ ಸರೋವರ ಸೇರಿದಂತೆ ಶ್ರೀನಗರ ನಗರವನ್ನು ಸುಂದರಿಯರು ಸುತ್ತಿ, ಕಾಶ್ಮೀರದ ಪ್ರಕೃತಿ ಸೌಂದರ್ಯವನ್ನು ಕೊಂಡಾಡಿದ್ದಾರೆ. ಆರು ಬಾರಿ ಪ್ರತಿಷ್ಠಿತ ಪ್ರಶಸ್ತಿ ಗೆದ್ದಿರುವ ಭಾರತ ಮೂರು ದಶಕಗಳ ನಂತರ ಟೂರ್ನಿಗೆ ಆತಿಥ್ಯ ವಹಿಸುತ್ತಿದೆ. ಭಾರತ ಕೊನೆಯ ಬಾರಿಗೆ 1996 ರಲ್ಲಿ ಈವೆಂಟ್ ಅನ್ನು ಆಯೋಜಿಸಿತ್ತು.
ಕಣಿವೆ ರಾಜ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಈ ವರ್ಷದ ಮೊದಲ ಆರು ತಿಂಗಳಲ್ಲಿ ಸುಮಾರು 17,000 ವಿದೇಶಿಗರು ಕಾಶ್ಮೀರ ಕಣಿವೆಗೆ ಭೇಟಿ ನೀಡಿದ್ದಾರೆ.