February 2, 2026
Monday, February 2, 2026
spot_img

Good Food | ಈ ಆಹಾರ ನಿಮ್ಮ ಪ್ಲೇಟ್ ನಲ್ಲಿದ್ರೆ ಅಡಿಯಿಂದ ಮುಡಿವರೆಗೂ ಸ್ಟ್ರಾಂಗ್ ಆಗಿರ್ತೀರಾ!

‘ಆಹಾರವೇ ಔಷಧ’ ಅನ್ನೋ ಮಾತು ಕೇಳೋಕೆ ಚೆನ್ನಾಗಿರುತ್ತೆ, ಆದರೆ ಪಾಲಿಸೋಕೆ ನಾವು ಹಿಂದೆ ಬೀಳ್ತೀವಿ. ದೇಹ ಅನ್ನೋದು ಒಂದು ಸೂಕ್ಷ್ಮ ಯಂತ್ರ. ಪ್ರತಿದಿನ ಕೆಲಸ ಮಾಡೋ ಪ್ರತಿಯೊಂದು ಅಂಗಕ್ಕೂ ಸರಿಯಾದ ಪೋಷಣೆ ಸಿಕ್ಕಾಗಲೇ ಅದು ದೀರ್ಘಕಾಲ ನಮ್ಮ ಜೊತೆ ನಿಲ್ಲುತ್ತೆ. ರುಚಿ ಹಿಂದೆ ಓಡುವ ಈ ಜೀವನಶೈಲಿಯಲ್ಲಿ, ಒಮ್ಮೆ ಅಂಗಾಂಗಗಳ ಮಾತನ್ನೂ ಕೇಳೋಣ.

ಲಿವರ್ | ದೇಹದ ಕ್ಲೀನರ್

ಲಿವರ್ ದೇಹದ ವಿಷಗಳನ್ನು ಹೊರಹಾಕೋ ಕೇಂದ್ರ. ಇದನ್ನು ಆರೋಗ್ಯವಾಗಿರಿಸಲು ಬೀಟ್‌ರೂಟ್, ಅರಿಶಿನ, ನಿಂಬೆಹಣ್ಣು ಸೂಪರ್. ಬೀಟ್‌ರೂಟ್ ಲಿವರ್ ಶುದ್ಧೀಕರಣಕ್ಕೆ ಸಹಾಯ ಮಾಡುತ್ತೆ. ಅರಿಶಿನದ ಕುರ್ಕ್ಯುಮಿನ್ ಲಿವರ್ ಸೆಲ್‌ಗಳಿಗೆ ರಕ್ಷಣೆ ಕೊಡುತ್ತೆ. ನಿಂಬೆಹಣ್ಣಿನ ವಿಟಮಿನ್ C ಕಾರ್ಯಕ್ಷಮತೆ ಹೆಚ್ಚಿಸುತ್ತದೆ.

ಕರುಳು | ಆರೋಗ್ಯದ ಮೂಲ

ಜೀರ್ಣಕ್ರಿಯೆ ಸರಿಯಾಗಿದ್ರೆ ದೇಹವೇ ಲೈಟ್ ಆಗಿರುತ್ತೆ. ಅಲೋವೇರಾ, ಸೌತೆಕಾಯಿ, ಸೇಬು ಕರುಳಿಗೆ ಸ್ನೇಹಿತರು. ನಾರಿನಂಶ ತುಂಬಿರುವ ಆಹಾರಗಳು ಗಟ್ ಬ್ಯಾಕ್ಟೀರಿಯಾಗಳನ್ನು ಬ್ಯಾಲೆನ್ಸ್ ಮಾಡುತ್ತವೆ.

ಕಣ್ಣು | ದೃಷ್ಟಿಯ ಶಕ್ತಿ

ಕ್ಯಾರೆಟ್, ಸಿಹಿಗಣಸು, ಬ್ರೊಕೊಲಿ ಕಣ್ಣುಗಳಿಗೆ ಬೆಸ್ಟ್. ಬೀಟಾ-ಕ್ಯಾರೋಟಿನ್ ದೃಷ್ಟಿ ಮಂದವಾಗೋದನ್ನು ತಡೆಯುತ್ತದೆ. ಪರದೆಗಳ ಕಾಲದಲ್ಲಿ ಈ ಆಹಾರಗಳು ಇನ್ನೂ ಅಗತ್ಯ.

ಮೆದುಳು | ಚುರುಕು ಚಿಂತನೆ

ವಾಲ್ನಟ್, ಬ್ಲೂಬೆರಿ, ಅರಿಶಿನ ಮೆದುಳಿನ ಆಹಾರ. ಒಮೆಗಾ-3 ಸ್ಮರಣಶಕ್ತಿ ಹೆಚ್ಚಿಸುತ್ತದೆ. ಬ್ಲೂಬೆರಿ ಏಕಾಗ್ರತೆ ಕಾಪಾಡುತ್ತದೆ.

ರಕ್ತ | ಜೀವದ ಹರಿವು

ಬೀಟ್‌ರೂಟ್, ದಾಳಿಂಬೆ, ಬೆಳ್ಳುಳ್ಳಿ ರಕ್ತ ಶುದ್ಧೀಕರಣಕ್ಕೆ ಸಹಕಾರಿ. ಹಿಮೋಗ್ಲೋಬಿನ್ ಹೆಚ್ಚಿಸಿ ದೇಹಕ್ಕೆ ಶಕ್ತಿ ಕೊಡುತ್ತವೆ.

ಇದನ್ನೂ ಓದಿ:

ಶ್ವಾಸಕೋಶ | ನಿಮ್ಮ ಜೀವಕ್ಕೆ ಸಾಕ್ಷಿ

ಶುಂಠಿ, ಅನಾನಸ್, ಬೆಳ್ಳುಳ್ಳಿ ಉಸಿರಾಟ ವ್ಯವಸ್ಥೆ ಬಲಪಡಿಸುತ್ತವೆ. ಅಲರ್ಜಿಗಳು, ಅಸ್ತಮಾ ಸಮಸ್ಯೆಗಳಿಗೆ ಸಹಾಯ ಮಾಡುತ್ತೆ.

ಒಟ್ಟಿನಲ್ಲಿ, ನಾವು ತಿನ್ನೋ ಪ್ರತಿಯೊಂದು ತುತ್ತೂ ನಮ್ಮ ಭವಿಷ್ಯದ ಆರೋಗ್ಯವನ್ನು ನಿರ್ಧರಿಸುತ್ತೆ. ದೊಡ್ಡ ಡಯೆಟ್ ಬೇಕಿಲ್ಲ, ಸರಿಯಾದ ಆಯ್ಕೆ ಸಾಕು. ಇಂದು ಅಂಗಾಂಗಗಳನ್ನು ಕಾಪಾಡಿದ್ರೆ, ನಾಳೆ ಜೀವನವೇ ನಮಗೆ ಧನ್ಯವಾದ ಹೇಳುತ್ತೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !