August 24, 2026
Monday, August 24, 2026
spot_img

CINE | ‘ಧುರಂಧರ್ 2’ ಫಸ್ಟ್ ಲುಕ್ ಪೋಸ್ಟರ್ ಔಟ್! ಅಕ್ಷಯ್ ಖನ್ನಾ ಇರೋದು ಪಕ್ಕಾ ಅಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

2025ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡ ‘ಧುರಂಧರ್’ ಚಿತ್ರದ ಸೀಕ್ವೆಲ್ ಬಗ್ಗೆ ಇದ್ದ ದೊಡ್ಡ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಮೊದಲ ಭಾಗದಲ್ಲಿ ಖಳನಟನಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಅಕ್ಷಯ್ ಖನ್ನಾ, ‘ಧುರಂಧರ್ 2’ನಲ್ಲಿ ಕಾಣಿಸಿಕೊಳ್ಳುವುದು ಅಧಿಕೃತವಾಗಿ ಖಚಿತವಾಗಿದೆ.

‘ಧುರಂಧರ್’ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಅಕ್ಷಯ್ ಖನ್ನಾ ನಿರ್ವಹಿಸಿದ್ದ ಪಾಕಿಸ್ತಾನದ ಲಿಯಾರಿ ಪ್ರದೇಶದ ಗ್ಯಾಂಗ್‌ಸ್ಟರ್ ರೆಹಮಾನ್ ಡಕಾಯಿತ್ ಅಲಿಯಾಸ್ ರೆಹಮಾನ್ ಬಲೋಚ್ ಪಾತ್ರ ಸಾವನ್ನಪ್ಪಿತ್ತು. ಇದರಿಂದ ಸೀಕ್ವೆಲ್‌ನಲ್ಲಿ ಅವರು ಇರಬಹುದೇ ಎಂಬ ಅನುಮಾನ ಹುಟ್ಟಿತ್ತು. ಆದರೆ ಈಗ ನಿರ್ದೇಶಕ ತಂಡವೇ ಸ್ಪಷ್ಟನೆ ನೀಡಿದ್ದು, ಫ್ಲ್ಯಾಶ್‌ಬ್ಯಾಕ್ ದೃಶ್ಯಗಳ ಮೂಲಕ ಅಕ್ಷಯ್ ಖನ್ನಾ ಪಾತ್ರ ಮತ್ತೆ ಕಥೆಯಲ್ಲಿ ಮೂಡಿಬರಲಿದೆ.

ಇದನ್ನೂ ಓದಿ:

ಫೆಬ್ರವರಿ 3ರಂದು ‘ಧುರಂಧರ್ 2’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದ್ದು, ಶೀಘ್ರದಲ್ಲೇ ಟೀಸರ್ ಕೂಡ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. ಆ ಪೋಸ್ಟ್‌ನಲ್ಲಿ ಅಕ್ಷಯ್ ಖನ್ನಾ ಅವರ ಹೆಸರನ್ನು ಹ್ಯಾಶ್‌ಟ್ಯಾಗ್ ಮೂಲಕ ಉಲ್ಲೇಖಿಸಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ.

ಮಾರ್ಚ್ 19ರಂದು ‘ಧುರಂಧರ್ 2’ ತೆರೆಗೆ ಬರಲಿದ್ದು, ಅದೇ ದಿನ ‘ಟಾಕ್ಸಿಕ್’ ಸಿನಿಮಾ ಕೂಡ ಬಿಡುಗಡೆಯಾಗಲಿರುವುದರಿಂದ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !