February 3, 2026
Tuesday, February 3, 2026
spot_img

Vastu | ಮನೆಗೆ ಶಾಂತಿ, ಮನಸ್ಸಿಗೆ ನೆಮ್ಮದಿ ತರುವ ಗಿಡಗಳಿವು! ನಿಮ್ಮನೇಲಿದ್ರೆ ಒಳ್ಳೆದು

ಮನೆ ಅಂದರೆ ಕೇವಲ ನಾಲ್ಕು ಗೋಡೆಗಳಲ್ಲ. ಅದು ನಮ್ಮ ಮನಸ್ಸಿನ ಸ್ಥಿತಿ, ಆರೋಗ್ಯ ಮತ್ತು ಆರ್ಥಿಕ ಸ್ಥಿರತೆಯನ್ನು ಪ್ರತಿಬಿಂಬಿಸುವ ಶಕ್ತಿಯ ಕೇಂದ್ರ. ವಾಸ್ತು ಶಾಸ್ತ್ರ ಹಾಗೂ ಜ್ಯೋತಿಷ್ಯದ ನಂಬಿಕೆಯ ಪ್ರಕಾರ, ಮನೆಯೊಳಗಿನ ವಾತಾವರಣ ಮತ್ತು ಸುತ್ತಲಿನ ಶಕ್ತಿಗಳು ನಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತವೆ. ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾದಾಗ ಅದಕ್ಕೆ ಸರಳವಾದ, ನೈಸರ್ಗಿಕ ಪರಿಹಾರವೆಂದರೆ ಕೆಲವು ವಿಶೇಷ ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸುವುದು. ಇವು ಮನೆಗೆ ಪಾಸಿಟಿವ್ ವೈಬ್ಸ್ ತರಲು ಸಹಾಯ ಮಾಡುತ್ತವೆ.

ತುಳಸಿ – ದೈವಿಕ ಶಕ್ತಿಯ ಸಂಕೇತ

ತುಳಸಿ ಗಿಡವನ್ನು ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರವಾಗಿ ಕಾಣಲಾಗುತ್ತದೆ. ಮನೆಯ ಈಶಾನ್ಯ ದಿಕ್ಕಿನಲ್ಲಿ ತುಳಸಿಯನ್ನು ಬೆಳೆಸಿದರೆ ವಾಸ್ತು ದೋಷಗಳು ಶಮನವಾಗುತ್ತವೆ ಎಂಬ ನಂಬಿಕೆ ಇದೆ. ಇದು ವಾತಾವರಣವನ್ನು ಶುದ್ಧಗೊಳಿಸುವುದರ ಜೊತೆಗೆ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

ಎಕ್ಕದ ಗಿಡ – ರಕ್ಷಾಕವಚದಂತೆ ಕಾರ್ಯ

ಶಿವನಿಗೆ ಪ್ರಿಯವಾದ ಎಕ್ಕದ ಗಿಡವು ಸೂರ್ಯ ಗ್ರಹಕ್ಕೆ ಸಂಬಂಧಿಸಿದೆ. ಮನೆಯ ಅಂಗಳ ಅಥವಾ ಬಾಲ್ಕನಿಯಲ್ಲಿ ಇದನ್ನು ನೆಟ್ಟರೆ ಕೆಟ್ಟ ದೃಷ್ಟಿ ಮತ್ತು ನಕಾರಾತ್ಮಕ ಪ್ರಭಾವಗಳಿಂದ ರಕ್ಷಣೆ ಸಿಗುತ್ತದೆ ಎನ್ನಲಾಗುತ್ತದೆ.

ಇದನ್ನೂ ಓದಿ:

ಡ್ರಾಸೀನಾ – ಮಾನಸಿಕ ಸ್ಥಿರತೆಗೆ

ಫೆಂಗ್ ಶೂಯಿ ಮತ್ತು ವಾಸ್ತು ಎರಡರಲ್ಲೂ ಡ್ರಾಸೀನಾಗೆ ವಿಶೇಷ ಸ್ಥಾನ ಇದೆ. ಮನೆಯ ಒಳಾಂಗಣದಲ್ಲಿ ಇಡುವ ಈ ಗಿಡವು ಒತ್ತಡ, ಗೊಂದಲ ಕಡಿಮೆ ಮಾಡಿ ಮನಸ್ಸಿಗೆ ಸಮತೋಲನ ತರುತ್ತದೆ.

ಪೀಸ್ ಲಿಲ್ಲಿ – ಶಾಂತಿಯ ಪ್ರತೀಕ

ಚಂದ್ರ ಗ್ರಹದ ಶಕ್ತಿ ಹೆಚ್ಚಿಸುವ ಪೀಸ್ ಲಿಲ್ಲಿ ಮನೆಯಲ್ಲಿ ಉದ್ವಿಗ್ನತೆ ಮತ್ತು ಗಲಾಟೆ ಕಡಿಮೆ ಮಾಡುತ್ತದೆ. ದಾಂಪತ್ಯ ಜೀವನದಲ್ಲಿ ಶಾಂತಿ ತರಲು ಇದು ಸಹಾಯಕ.

ಲಕ್ಕಿ ಬ್ಯಾಂಬೂ – ಆರ್ಥಿಕ ಶುಭದ ಸಂಕೇತ

ಲಿವಿಂಗ್ ರೂಮ್ ಅಥವಾ ಕಚೇರಿಯಲ್ಲಿ ಇಡುವ ಲಕ್ಕಿ ಬ್ಯಾಂಬೂ ಸಮೃದ್ಧಿ ಮತ್ತು ಯಶಸ್ಸನ್ನು ಆಕರ್ಷಿಸುತ್ತದೆ ಎನ್ನಲಾಗುತ್ತದೆ. ಇದು ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳನ್ನು ಕಡಿಮೆ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.)

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !