February 3, 2026
Tuesday, February 3, 2026
spot_img

ಗ್ರಾಹಕರಂತೆ ಬಂದ್ರು, ಬೆಳ್ಳಿ ಸರದೊಂದಿಗೆ ಮಾಯವಾದ್ರು! ಕಿಲಾಡಿ ಮಹಿಳೆಯರ ಕೈಚಳಕ ಹೇಗಿದೆ ನೋಡಿ

ಹೊಸದಿಗಂತ ಕಲಬುರಗಿ:

ಕಾಲು ಚೈನ್ ಖರೀದಿಸುವ ನಾಟಕವಾಡಿ, ಚಾಣಾಕ್ಷತನದಿಂದ ಬೆಳ್ಳಿ ಆಭರಣಗಳನ್ನು ಕಳವು ಮಾಡಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ್ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ರಾಮಾಚಾರಿ ಮಾರೋಜ ಅವರಿಗೆ ಸೇರಿದ ‘ಆರ್.ಆರ್.ಮಾರೋಜ’ ಚಿನ್ನದ ಅಂಗಡಿಗೆ ಬುರ್ಖಾ ಧರಿಸಿದ ಇಬ್ಬರು ಮಹಿಳೆಯರು ಗ್ರಾಹಕರಂತೆ ಬಂದಿದ್ದಾರೆ. ಅಂಗಡಿ ಮಾಲೀಕರಿಗೆ ಬೆಳ್ಳಿ ಕಾಲು ಚೈನ್ ತೋರಿಸುವಂತೆ ಕೇಳಿದ್ದಾರೆ. ಮಾಲೀಕರು ಒಂದೊಂದಾಗಿ ಆಭರಣಗಳನ್ನು ತೋರಿಸುತ್ತಿದ್ದಾಗ, ಅವರ ಗಮನ ಬೇರೆಡೆ ಸೆಳೆದ ಈ ಮಹಿಳೆಯರು ಸುಮಾರು 400 ಗ್ರಾಂ ತೂಕದ 6 ಬೆಳ್ಳಿ ಸರಗಳನ್ನು ಕ್ಷಣಾರ್ಧದಲ್ಲಿ ಬಚ್ಚಿಟ್ಟುಕೊಂಡಿದ್ದಾರೆ. ಮಾಲೀಕರಿಗೆ ತಿಳಿಯದಂತೆ ಅಲ್ಲಿಂದ ಚಾಕಚಕ್ಯತೆಯಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ:

ಈ ಇಡೀ ಕಳ್ಳತನದ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೃಶ್ಯಗಳಲ್ಲಿ ಮಹಿಳೆಯರು ಹಂತ ಹಂತವಾಗಿ ಆಭರಣಗಳನ್ನು ಹೇಗೆ ಲಪಟಾಯಿಸಿದರು ಎಂಬುದು ಸ್ಪಷ್ಟವಾಗಿ ದಾಖಲಾಗಿದೆ.

ಘಟನೆ ಸಂಬಂಧ ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಕಿಲಾಡಿ ಮಹಿಳೆಯರ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !