March 23, 2026
Monday, March 23, 2026
spot_img

ಜೀವನದ ಕೊನೆಯ ಹಂತದಲ್ಲಿದ್ದೇನೆ, ನನ್ನ ಮನವಿಗೆ ಸ್ಪಂದಿಸಿ: ದೇವೇಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನನಗೆ ವಯಸ್ಸಾಗಿದೆ, ಜೀವನದ ಕಡೆಯ ಘಟ್ಟದಲ್ಲಿದ್ದೇನೆ ಆದರೆ ರೈತರಿಗಾಗಿ ಕಡೆಯ ಉಸಿರಿರುವವರೆಗೂ ಹೋರಾಡುತ್ತೇನೆ. ನನ್ನ ಮಾತು ಕೇಳ್ರಯ್ಯಾ, ಮನವಿ ಮಾಡ್ತಿದ್ದೇನೆ..

ರಾಜ್ಯಸಭೆಯಲ್ಲಿ ಗದ್ಗದಿತ ದನಿಯಲ್ಲಿ ಕೇಳಿಬಂದ ಮಾಜಿ ಪ್ರಧಾನಿ ದೇವೇಗೌಡರ ಮಾತುಗಳಿವು..

ರಾಜ್ಯದ ನೀರಾವರಿ ಬಗ್ಗೆ ಮಾತನಾಡಲು ಆರಂಭಿಸಿದ ದೇವೇಗೌಡರು, ನಮ್ಮ ರೈತರು ಕಷ್ಟದಲ್ಲಿದ್ದಾರೆ, ಅವರನ್ನು ನೋಡ್ಕೊಳಿ, ನಾನು ವೃದ್ಧ ನನ್ನ ಮಾತನ್ನು ಕೇಳಿ, ಮಾನವೀಯತೆಯಿಂದ ನನ್ನ ಮನವಿಗೆ ಸ್ಪಂದಿಸಿ ಎಂದಿದ್ದಾರೆ.

ದೇವೇಗೌಡರ ಭಾವುಕ ಮಾತುಗಳನ್ನು ಕೇಳಿ ಇಡೀ ಸದನ ಒಂದು ಕ್ಷಣ ಮೌನಕ್ಕೆ ಜಾರಿದೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಹೆಚ್​​ಡಿ ದೇವೇಗೌಡರು, ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ರಾಜ್ಯದ ಅನೇಕ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಸಮಸ್ಯೆಗೆ ಪರಿಹಾರ ನೀಡಿ ಎಂದು ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !