February 7, 2026
Saturday, February 7, 2026
spot_img

ಬಂಗಾರದ ಅಂಗಡಿಗೆ ಬಂದು ಚಿನ್ನದ ಸರ ಕಚ್ಚಿಕೊಂಡು ಹೋದ ಪಾರಿವಾಳ, ವ್ಯಾಪಾರಿ ಕಥೆ ಗೋವಿಂದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಾರಿವಾಳವೊಂದು ಬಂಗಾರದ ಅಂಗಡಿಗೆ ಬಂದು ಚಿನ್ನದ ಸರವನ್ನು ಕಚ್ಚಿಕೊಂಡು ಹೋಗಿದೆ. ಗೋಲ್ಡ್‌ ರೇಟ್‌ ಗಗನಕ್ಕೇರಿರುವ ಈ ಸಮಯಲ್ಲಿ ಬರೋಬ್ಬರಿ ಒಂದು ಲಕ್ಷ ರೂಪಾಯಿ ಮೌಲ್ಯದ ಸರವನ್ನು ಪಾರಿವಾಳ ಕಚ್ಚಿಕೊಂಡು ಹೋಗಿದ್ದು, ಅಂಗಡಿ ಮಾಲೀಕನಿಗೆ ತಲೆಬಿಸಿಯಾಗಿದೆ.

ರಾಜಸ್ಥಾನದ ನಾಗೌರ್‌ನ ದೇಗಾನಾ ನಗರದ ಬೆಳ್ಳಿಯ ಮಾರುಕಟ್ಟೆಯಲ್ಲಿ ನಡೆದಿದೆ. ಆಭರಣದ ಅಂಗಡಿಯೊಳಗೆ ಬಂದು ಪಾರಿವಾಳವೊಂದು ಸುಮಾರು 1 ಲಕ್ಷ ರುಪಾಯಿ ಮೌಲ್ಯದ ಚಿನ್ನದ ಸರವನ್ನು ತನ್ನ ಕೊಕ್ಕಿನಲ್ಲಿ ಹಿಡಿದುಕೊಂಡು ಹಾರಿಹೋಯಿತು. ಆಭರಣ ವ್ಯಾಪಾರಿ ಇದನ್ನು ನೋಡಿ ಶಾಕ್ ಆಗಿದ್ದಾನೆ. ಆದರೆ ನಂತರ ಪಾರಿವಾಳವು ಸರವನ್ನು ಮಹಡಿಯ ಮೇಲೆ ಎಸೆದು ಹೋಗಿದೆ.

ದೇಗಾನಾದ ಬೆಳ್ಳಿಯ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಕೆಲವು ಕುಶಲಕರ್ಮಿಗಳು ಆಭರಣ ಅಂಗಡಿಯ ಮೇಲಿನ ಮಹಡಿಯಲ್ಲಿ ಚಿನ್ನದ ಆಭರಣಗಳನ್ನು ತಯಾರಿಸುತ್ತಿದ್ದರು. ಇದ್ದಕ್ಕಿದ್ದಂತೆ, ಒಂದು ಪಾರಿವಾಳ ಅಂಗಡಿಯೊಳಗೆ ಪ್ರವೇಶಿಸಿತು. ಕೆಲವೇ ಕ್ಷಣಗಳಲ್ಲಿ ಚಿನ್ನದ ಸರವನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರಿಹೋಯಿತು. ಈ ಅಸಾಮಾನ್ಯ ಘಟನೆಯ ನಂತರ ಕುಶಲಕರ್ಮಿಗಳು ಮತ್ತು ಅಂಗಡಿಯವರು ಸ್ವಲ್ಪ ಸಮಯದವರೆಗೆ ದಿಗ್ಭ್ರಮೆಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !