ಹೋಟೆಲ್‌ಗಳಲ್ಲಿ ಸಿಗುವಂತೆ ರುಚಿಯಾದ, ಮೃದುವಾದ ಮಶ್ರೂಮ್ ಗ್ರೇವಿಯನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ಚಪಾತಿ, ರೋಟಿ, ನಾನ್ ಅಥವಾ ಅನ್ನದ ಜೊತೆ ಚೆನ್ನಾಗಿ ಹೊಂದುತ್ತದೆ. ಕಡಿಮೆ ಸಮಯದಲ್ಲಿ ತಯಾರಾಗುವ ಈ ವೆಜ್ ಡಿಶ್, ಮಶ್ರೂಮ್ ಪ್ರಿಯರಿಗೆ ತುಂಬಾ ಇಷ್ಟವಾಗುತ್ತೆ.
ಬೇಕಾಗುವ ಪದಾರ್ಥಗಳು:
ಮಶ್ರೂಮ್ – 200 ಗ್ರಾಂ
ಈರುಳ್ಳಿ – 2
ಟೊಮಾಟೊ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಹಸಿ ಮೆಣಸಿನಕಾಯಿ – 2
ಅರಿಶಿನ – ¼ ಟೀ ಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ/ಬೆಣ್ಣೆ – 2 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ:
ಮೊದಲು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಕತ್ತರಿಸಿದ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ. ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಕಲಸಿ.
ನಂತರ ಟೊಮಾಟೊ ಪೇಸ್ಟ್, ಅರಿಶಿನ, ಮೆಣಸಿನ ಪುಡಿ, ಧನಿಯಾ ಪುಡಿ ಮತ್ತು ಉಪ್ಪು ಸೇರಿಸಿ ಎಣ್ಣೆ ಬಿಡುವವರೆಗೆ ಬೇಯಿಸಿ.
ಈಗ ಕತ್ತರಿಸಿದ ಮಶ್ರೂಮ್ ಹಾಕಿ 5–7 ನಿಮಿಷ ಮುಚ್ಚಿ ಬೇಯಿಸಿ. ಮಶ್ರೂಮ್ ನೀರು ಬಿಡುತ್ತದೆ, ಅದರಲ್ಲಿ ಚೆನ್ನಾಗಿ ಮೃದುವಾಗುವವರೆಗೆ ಫ್ರೈ ಮಾಡಿ. ಕೊನೆಯಲ್ಲಿ ಗರಂ ಮಸಾಲಾ ಮತ್ತು ಸ್ವಲ್ಪ ನೀರು ಸೇರಿಸಿ ಗ್ರೇವಿ ದಪ್ಪಗಾಗುವವರೆಗೆ ಆಗುವವರೆಗೆ 3–4 ನಿಮಿಷ ಕುದಿಸಿ. ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.



