February 9, 2026
Monday, February 9, 2026
spot_img

ಕುನೋ ಉದ್ಯಾನವನದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ ‘ಆಶಾ’: ಚೀತಾಗಳ ಸಂಖ್ಯೆ 35 ಕ್ಕೆ ಏರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಜೆಕ್ಟ್ ಚೀತಾ ಯೋಜನೆಗೆ ಮತ್ತೊಂದು ಮಾಲಿಗಲ್ಲು ತಲುಪಿದೆ. ‘ಆಶಾ’ ಎಂಬ ನಮೀಬಿಯಾದ ಚೀತಾ ಐದು ಮರಿಗಳಿಗೆ ಜನ್ಮ ನೀಡಿದ್ದು, ದೇಶದ ಚೀತಾ ಸಂರಕ್ಷಣಾ ಪ್ರಯತ್ನಗಳಿಗೆ ಮಹತ್ವದ ಬಲ ನೀಡಿದೆ. ಹೊಸ ಮರಿಗಳ ಆಗಮನದಿಂದ ಭಾರತದ ಒಟ್ಟು ಚೀತಾ ಸಂಖ್ಯೆ 35 ಕ್ಕೆ ಏರಿಕೆಯಾಗಿದೆ.

ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಈ ಬೆಳವಣಿಗೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಇದು ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ. ಆಶಾ ಈಗ ಎರಡನೇ ಬಾರಿ ತಾಯಿಯಾಗಿದ್ದು, ಮರಿಗಳು ಆರೋಗ್ಯವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:

ಒಮ್ಮೆ ಭಾರತದೆಲ್ಲೆಡೆ ಕಂಡುಬರುತ್ತಿದ್ದ ಚೀತಾಗಳು ಅತಿಯಾದ ಬೇಟೆಯಿಂದ 1952ರಲ್ಲಿ ಸಂಪೂರ್ಣವಾಗಿ ನಾಶವಾಗಿವೆ ಎಂದು ಘೋಷಿಸಲಾಯಿತು. ಬಳಿಕ 2022ರಲ್ಲಿ ಪ್ರಾಜೆಕ್ಟ್ ಚೀತಾ ಮೂಲಕ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ಕುನೋ ಉದ್ಯಾನವನಕ್ಕೆ ಸ್ಥಳಾಂತರಿಸಿ ಪುನರ್ವಸತಿ ಕಾರ್ಯ ಆರಂಭಿಸಲಾಯಿತು. ಈಗ ಹೊಸ ಮರಿಗಳ ಜನನದಿಂದ ಈ ಯೋಜನೆ ಮತ್ತಷ್ಟು ಯಶಸ್ಸಿನ ದಿಕ್ಕಿನಲ್ಲಿ ಸಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !