October 12, 2026
Monday, October 12, 2026
spot_img

ದಿನಭವಿಷ್ಯ | ಅಂದುಕೊಂಡ ಕೆಲಸ ಯಶಸ್ಸು, ಕಾಯುತ್ತಿದ್ದ ಹಣ ನಿಮ್ಮ ಕೈಗೆ ಸೇರಲಿದೆ

ಮೇಷ
 ಉದ್ದೇಶ ಪ್ರಾಪ್ತಿ.ಉತ್ಸಾಹದ ದಿನ. ದೀರ್ಘ ಕಾಲದಿಂದ ಕಾಯುತ್ತಿದ್ದ ಹಣ ಪಾವತಿಯಾಗಲಿದೆ. ದೈಹಿಕ ನೋವಿದ್ದರೆ ಇಂದು ಶಮನ ಕಾಣಲಿದೆ.  
ವೃಷಭ
ಕೌಟುಂಬಿಕ ಪರಿಸರ ಉಲ್ಲಾಸದಾಯಕ. ಸಂಗಾತಿ ಜೊತೆ ಹೊಂದಾಣಿಕೆ. ಕುಟುಂಬ ಸದಸ್ಯರ ಜತೆ ಕಾಲ ಕಳೆಯುವ ಜತೆಗೇ ಖರ್ಚೂ ಹೆಚ್ಚಬಹುದು.  
ಮಿಥುನ
ವಿರಾಮ ಪಡೆಯ ಬಯಸಿದರೂ ಕೆಲಸದ ಒತ್ತಡ ಕಡಿಮೆಯಾಗದು. ಸಂಗಾತಿ ಜತೆಗೆ ಭಿನ್ನಮತ ಸಂಭವ. ಆರ್ಥಿಕವಾಗಿ ತೃಪ್ತಿಕರ ಬೆಳವಣಿಗೆ.  
ಕಟಕ
ಸರಿಯಾದ ದಿಕ್ಕಿನಲ್ಲಿ ನಿಮ್ಮ ಶ್ರಮ ವಹಿಸಿ. ಇಲ್ಲವಾದರೆ ಪ್ರಯತ್ನ ವ್ಯರ್ಥವಾದೀತು. ಕೌಟುಂಬಿಕ ವಾಗ್ವಾದ ಸಂಭವ. ಸಹನೆಯಿರಲಿ.  
ಸಿಂಹ
ನಿಮ್ಮ ಕಾರ್ಯಶೈಲಿ ಪ್ರಶ್ನಿಸಲ್ಪಡಬಹುದು. ತಪ್ಪಿದ್ದರೆ ತಿದ್ದಿಕೊಳ್ಳಿ. ನೆರೆಯವರ ಜತೆ ಸಂಘರ್ಷಕ್ಕೆ ಇಳಿಯದಿರಿ. ಖರ್ಚು ಧನವ್ಯಯ.
ಕನ್ಯಾ
ಉದ್ದೇಶಿತ ಕಾರ್ಯ ಇಂದು ಪೂರ್ಣಗೊಳ್ಳದು. ಅನುಚಿತ ಮಾತು ಜಗಳಕ್ಕೆ ಕಾರಣವಾದೀತು. ನಡೆನುಡಿಯಲ್ಲಿ ಎಚ್ಚರ ವಹಿಸಿ. ಧನಪ್ರಾಪ್ತಿಯಿದೆ.  
ತುಲಾ
ವಿವಿಧ ಬಗೆಯ ಒತ್ತಡ ಎದುರಿಸುವಿರಿ. ವಿರಾಮ ಬಯಸಿದರೂ ಸಿಗದು. ವ್ಯಯ ಅಧಿಕ. ಕೌಟುಂಬಿಕ ಕಾರ್ಯ ಹೆಚ್ಚು ಸಮಯ ಬಯಸುವುದು.    
ವೃಶ್ಚಿಕ
ಯಶಸ್ವಿ ದಿನ. ಕಾರ್ಯದಲ್ಲಿ ಸಫಲತೆ. ಮನೆಯಲ್ಲಿ ಕಠಿಣ ಮಾತು ಆಡದಿರಿ. ಸೌಹಾರ್ದತೆ ಹಾಳಾದೀತು. ಆರ್ಥಿಕ ಪರಿಸ್ಥಿತಿ ಉತ್ತಮ.
ಧನು
ಆಪ್ತರ ಜೊತೆ ಮೂಡಿದ್ದ ವಿರಸ ಸರಿಪಡಿಸಲು ಯತ್ನಿಸಿ. ವ್ಯವಹಾರದಲ್ಲಿ ಲಾಭ. ಧನಪ್ರಾಪ್ತಿ. ಆರೋಗ್ಯ ಪರಿಸ್ಥಿತಿ ಸುಸ್ಥಿರ.  
ಮಕರ
ನಿಮ್ಮ ಕೌಶಲಕ್ಕೆ ಮನ್ನಣೆ ದೊರಕಲಿದೆ. ವೃತ್ತಿ ಸಂಬಂಧ ಪಯಣ ಸಂಭವ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.  ಧನವ್ಯಯ ಹೆಚ್ಚು.  
ಕುಂಭ
ಇತರರ ಮೆಚ್ಚುಗೆಗೆ ಕಾಯದೆ ನಿಮ್ಮ ಕೆಲಸ ಮಾಡಿರಿ. ನಿಮ್ಮ ಕಾರ್ಯ ಗುರುತಿಸುತ್ತಿಲ್ಲ ಎಂಬ ಚಿಂತೆ ಬಿಡಿ. ಮುಂದೆ ನಿಮಗೆ ಒಳಿತು ಕಾದಿದೆ.  
 ಮೀನ
ನಿಮ್ಮ ಅಭಿಪ್ರಾಯ ಮಂಡನೆಗೆ ಮನ್ನಣೆ ಸಿಗಲಿದೆ. ಕೆಲವು ಬೆಳವಣಿಗೆ ಮಾನಸಿಕ ಒತ್ತಡ, ಅಶಾಂತಿಗೆ ಕಾರಣವಾದೀತು.

Must Read