February 10, 2026
Tuesday, February 10, 2026
spot_img

LIFE | Overthinking ಮಾಡೋದನ್ನು ನಿಲ್ಲಿಸೋದೇ ಒಂದು ರೀತಿಯ Self Love ಅಲ್ವಾ! ಏನಂತೀರಾ?

ಕೆಲವು ಬಾರಿ ನಾವು ಎದುರಿಸೋ ಸಮಸ್ಯೆಗಿಂತ, ಅದನ್ನೇ ಮತ್ತೆ ಮತ್ತೆ ಯೋಚಿಸೋದು ನಮ್ಮನ್ನ ಹೆಚ್ಚು ಚಿಂತೆಗೀಡು ಮಾಡುತ್ತೆ. ನಡೆದದ್ದನ್ನು, ನಡೆಯೋದು, ಇನ್ನೂ ನಡೆಯಬಹುದಾದ್ದನ್ನು ಮನಸ್ಸಿನಲ್ಲಿ ಸಾವಿರ ಬಾರಿ ತಿರುಗಿಸುತ್ತಾ ಇರುವುದು ನಮ್ಮ ಶಾಂತಿಯನ್ನು ಕಿತ್ತುಕೊಳ್ಳುತ್ತದೆ. Overthinking ಅನ್ನೋದು ನಾವೇ ನಮಗೆ ಕೊಡುವ ಮೌನದ ಒತ್ತಡ. ಅದನ್ನು ನಿಧಾನವಾಗಿ ಬಿಡೋದನ್ನ ಕಲಿಯೋದು, ನಮ್ಮನ್ನ ನಾವು ಕಾಪಾಡಿಕೊಳ್ಳೋದಕ್ಕೆ ಒಂದು ರೀತಿಯ Self Love ಅಂತಲೇ ಹೇಳಬಹುದು.

ನಮ್ಮ ಮನಸ್ಸು ಸದಾ ಉತ್ತರ ಹುಡುಕುತ್ತಲೇ ಇರುತ್ತದೆ. ಆದರೆ ಪ್ರತೀ ಪ್ರಶ್ನೆಗೆ ತಕ್ಷಣ ಉತ್ತರ ಸಿಗಬೇಕೆಂದಿಲ್ಲ. ಕೆಲವೊಮ್ಮೆ ಯೋಚನೆ ನಿಲ್ಲಿಸುವುದು ತಪ್ಪಲ್ಲ, ಅದು ಮನಸ್ಸಿಗೆ ವಿಶ್ರಾಂತಿ ಕೊಡುವುದು.

ಎಲ್ಲವನ್ನೂ ನಮ್ಮ ಕೈಯಲ್ಲಿ ಇಡಬೇಕು ಅನ್ನೋ ಪ್ರಯತ್ನವೇ ಹೆಚ್ಚು Overthinkingಗೆ ಕಾರಣವಾಗುತ್ತದೆ. “ಸರಿ, ಆಗಿದ್ದು ಆಗಲಿ” ಅಂತ ಒಪ್ಪಿಕೊಳ್ಳೋದು ಕೂಡ Self Loveನ ಭಾಗ.

ಹಿಂದಿನ ತಪ್ಪುಗಳು, ಮುಂದಿನ ಭಯಗಳು – ಇವೆರಡರ ನಡುವೆ ಸಿಲುಕಿಕೊಂಡಾಗ ನಾವು ಇಂದಿನ ಕ್ಷಣವನ್ನು ಮಿಸ್ ಮಾಡುತ್ತೇವೆ. ಇವತ್ತಿನ ದಿನವನ್ನು ಅನುಭವಿಸೋದು Overthinkingಗೆ ಉತ್ತಮ ಔಷಧಿ.

ಇದನ್ನೂ ಓದಿ:

ನಮ್ಮ ತಪ್ಪುಗಳ ಬಗ್ಗೆ ನಾವು ನಮಗೆ ತುಂಬ ಕಠಿಣವಾಗಿ ಮಾತನಾಡುತ್ತೇವೆ. ಆದರೆ ಸ್ವಲ್ಪ ಮೃದುವಾಗಿ ನಮ್ಮನ್ನ ನಾವು ಅರ್ಥ ಮಾಡಿಕೊಂಡಾಗ, ಮನಸ್ಸು ಸ್ವಲ್ಪ ಹಗುರವಾಗುತ್ತದೆ.

ಪ್ರತಿ ವಿಚಾರಕ್ಕೂ ಅರ್ಥ ಹುಡುಕೋದು, ಪ್ರತೀ ಮಾತಿನ ಹಿಂದೆ ಕಾರಣ ಹುಡುಕೋದು ಇವೆಲ್ಲ ನಮ್ಮನ್ನ ಹಾಳುಮಾಡುತ್ತವೆ. ಕೆಲವೊಮ್ಮೆ “ಬಿಡು” ಅನ್ನೋ ನಿರ್ಧಾರವೇ ಮನಸ್ಸಿಗೆ ಶಾಂತಿ ಕೊಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !