April 10, 2026
Friday, April 10, 2026
spot_img

ಅಬ್ಬಬ್ಬಾ….ಲಾಟ್ರಿ.. | US–Bangladesh Trade Deal ! ಹೊಸ ಒಪ್ಪಂದದಿಂದ ಬಾಂಗ್ಲಾದೇಶಕ್ಕೆ ಟ್ಯಾರಿಫ್ ಕಡಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಮತ್ತು ಬಾಂಗ್ಲಾದೇಶ ನಡುವೆ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇದರ ಪರಿಣಾಮವಾಗಿ ಬಾಂಗ್ಲಾದೇಶದ ಮೇಲಿದ್ದ ಆಮದು ಸುಂಕವನ್ನು ಅಮೆರಿಕವು 19 ಶೇಕಡಾಕ್ಕೆ ಇಳಿಸಿದೆ.

ಜವಳಿ ಮತ್ತು ಉಡುಪು ಸೇರಿದಂತೆ ಕೆಲವು ಉತ್ಪನ್ನಗಳಿಗೆ ಸಂಪೂರ್ಣ ವಿನಾಯಿತಿ ನೀಡುವ ನಿರ್ಧಾರವೂ ಕೈಗೊಳ್ಳಲಾಗಿದೆ. ಈ ಒಪ್ಪಂದದ ಭಾಗವಾಗಿ, ಬಾಂಗ್ಲಾದೇಶ ತನ್ನ ಮಾರುಕಟ್ಟೆಯನ್ನು ಅಮೆರಿಕದ ಹಲವಾರು ಕೈಗಾರಿಕಾ ಮತ್ತು ಕೃಷಿ ಉತ್ಪನ್ನಗಳಿಗೆ ತೆರೆಯಲಿದೆ. ಸೋಯಾ, ಡೈರಿ, ಯಂತ್ರೋಪಕರಣ, ವಾಹನ ಭಾಗಗಳು, ವೈದ್ಯಕೀಯ ಸಾಧನಗಳು ಹಾಗೂ ಹಣ್ಣುಗಳಿಗೆ ಆದ್ಯತೆಯೊಂದಿಗೆ ಪ್ರವೇಶ ಕಲ್ಪಿಸುವುದಾಗಿ ತಿಳಿಸಲಾಗಿದೆ. ಜೊತೆಗೆ ಅಮೆರಿಕದ ಸುರಕ್ಷತಾ ಹಾಗೂ ಆಹಾರ ಗುಣಮಟ್ಟದ ಮಾನದಂಡಗಳನ್ನು ಅಂಗೀಕರಿಸುವ ನಿರ್ಧಾರವೂ ಮಾಡಲಾಗಿದೆ.

ಇದನ್ನೂ ಓದಿ:

ಮುಂದಿನ 15 ವರ್ಷಗಳಲ್ಲಿ ಅಮೆರಿಕದಿಂದ 15 ಬಿಲಿಯನ್ ಡಾಲರ್ ಮೌಲ್ಯದ ಇಂಧನ ಹಾಗೂ 3.5 ಬಿಲಿಯನ್ ಡಾಲರ್ ಕೃಷಿ ಉತ್ಪನ್ನಗಳನ್ನು ಖರೀದಿಸಲು ಬಾಂಗ್ಲಾದೇಶ ಬದ್ಧವಾಗಿದೆ. ಜೊತೆಗೆ ಬಿಮಾನ್ ಏರ್ಲೈನ್ಸ್ 14 ಬೋಯಿಂಗ್ ವಿಮಾನಗಳನ್ನು ಖರೀದಿಸಲು ಯೋಜಿಸಿದೆ. ಈ ಒಪ್ಪಂದದಿಂದ ಜವಳಿ ರಫ್ತು ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ಸಿಗುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !