February 10, 2026
Tuesday, February 10, 2026
spot_img

ಟಿ20 ವಿಶ್ವಕಪ್‌ | ಬಾಸ್ ಡಿ ಲೀಡೆ ಆಲ್‌ರೌಂಡರ್‌ ಆಟ: ನಮೀಬಿಯಾ ವಿರುದ್ಧ ನೆದರ್ಲ್ಯಾಂಡ್‌ ಗೆ ಗೆಲುವು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್‌ ನಲ್ಲಿ ಬಾಸ್ ಡಿ ಲೀಡೆ ಅವರ ಆಲ್‌ರೌಂಡರ್‌ ಆಟದ ನೆರವಿನಿಂದ ನೆದರ್ಲ್ಯಾಂಡ್‌, ನಮೀಬಿಯಾ ಎದುರು 7 ವಿಕೆಟ್‌ ಅಂತರದ ಗೆಲುವು ಸಾಧಿಸಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದ ನೆದರ್ಲ್ಯಾಂಡ್‌ ಬೌಲಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ ಆಹ್ವಾನ ಪಡೆದ ನಮೀಬಿಯಾ 8 ವಿಕೆಟ್‌ಗೆ 156 ರನ್‌ ಬಾರಿಸಿತು. ನೆದರ್ಲ್ಯಾಂಡ್‌ ಈ ಸ್ಪರ್ಧಾತ್ಮಕ ಮೊತ್ತವನ್ನು 18 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 159 ರನ್‌ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು. ನೆದರ್ಲ್ಯಾಂಡ್‌ಗೆ ಇದು ಎರಡನೇ ಪಂದ್ಯವಾಗಿತ್ತು. ಇದಕ್ಕೂ ಮುನ್ನ ಪಾಕಿಸ್ತಾನ ವಿರುದ್ಧ ಸೋಲು ಕಂಡಿತ್ತು.

ನೆದರ್ಲ್ಯಾಂಡ್‌ ನ ಬಾಸ್ ಡಿ ಲೀಡೆ ಬಿರುಸಿನ ಬ್ಯಾಟಿಂಗ್‌ ನಡೆಸಿ 48 ಎಸೆತಗಳಲ್ಲಿ 4 ಸೊಗಸಾದ ಸಿಕ್ಸರ್‌ ಮತ್ತು 5 ಬೌಂಡರಿ ನೆರವಿನಿಂದ ಅಜೇಯ 72 ರನ್‌ ಬಾರಿಸಿದರು.
ಇವರಿಗೆ ಮತ್ತೊಂದು ತುದಿಯಲ್ಲಿ ಮೈಕೆಲ್ ಲೆವಿಟ್(28) ಮತ್ತು ಕಾಲಿನ್ ಅಕರ್ಮನ್(32) ಉತ್ತಮ ಸಾಥ್‌ ನೀಡಿದರು. ಬ್ಯಾಟಿಂಗ್‌ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಮಿಂಚಿದ ಬಾಸ್ ಡಿ ಲೀಡೆ 2 ವಿಕೆಟ್‌ ಕಿತ್ತರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !