February 11, 2026
Wednesday, February 11, 2026
spot_img

ಗಡಿ ಮೀರಿದ ಮಾಲಿನ್ಯ: ಬೆಳಗಾವಿ, ಮಂಗಳೂರು, ಮೈಸೂರಿನಲ್ಲೂ ‘ಗಾಳಿ’ ಗಂಡಾಂತರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ರಾಜ್ಯದ ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕ, ಇಂದು ಮತ್ತೆ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ.

ನಿನ್ನೆ ತುಸು ಸುಧಾರಣೆ ಕಂಡಂತೆ ಭಾಸವಾಗಿದ್ದರೂ, ಇಂದು ಬೆಂಗಳೂರಿನಲ್ಲಿ AQI 178ಕ್ಕೆ ಏರಿಕೆಯಾಗಿದೆ. ಕೇವಲ ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಇತರ ಪ್ರಮುಖ ನಗರಗಳಾದ ಮಂಗಳೂರು, ಮೈಸೂರು ಮತ್ತು ಬೆಳಗಾವಿಯಲ್ಲೂ ವಾಯು ಗುಣಮಟ್ಟ 170ರ ಗಡಿ ದಾಟಿದ್ದು, ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಪರಿಸ್ಥಿತಿ ಕೇವಲ ಮಹಾನಗರಗಳಿಗೆ ಸೀಮಿತವಾಗಿಲ್ಲ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ 160 ಹಾಗೂ ಗಣಿ ನಾಡು ಬಳ್ಳಾರಿಯಲ್ಲಿ 168 ರಷ್ಟು AQI ದಾಖಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳಿಗೆ ಹೋಲಿಸಿದರೆ ಈ ಅಂಕಿ-ಅಂಶಗಳು ಅತ್ಯಂತ ಅಪಾಯಕಾರಿಯಾಗಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !