ಹೊಸದಿಗಂತ ವರದಿ ಬೆಳಗಾವಿ :
ನಕಲಿ ದಾಖಲಾತಿಗಳ ಸೃಷ್ಟಿಸಿ 2 ಕೋಟಿ ಆಸ್ತಿ ಕಬಳಿಸಲು ಯತ್ನ ಹುಕ್ಕೇರಿ ಉಪ ನೋಂದಣಾಧಿಕಾರಿ ಸೇರಿ 9 ಆರೋಪಿಗಳನ್ನು ಎಂದು ಬೆಳಗಾವಿ ಎಸ್ ಪಿ ಕೆ. ರಾಮರಾಜನ್ ಹೇಳಿದರು.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಕಲಿ ದಾಖಲಾತಿಗಳ ಸೃಷ್ಟಿಸಿ 2 ಕೋಟಿ ಆಸ್ತಿ ಕಬಳಿಸಲು ಯತ್ನದ ಪ್ರಕರಣಕ್ಕೆ ಆರೋಪಿಗಳ ಬಗ್ಗೆ ಶಿವಾನಂದ ಮಾರುತಿ ಕುದ್ದೂರಿ. ಸಾ. ಕುರಣಿ, ಇವರು ಹುಕ್ಕೇರಿ ಠಾಣೆಯಲ್ಲಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲಾಗಿತ್ತು ಅವರು ನೀಡಿರುವ ದೂರಿನ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡ ಹುಕ್ಕೇರಿ ಪೊಲೀಸರು ತನಿಖೆ ನಡೆಸಿ ಈಗಾಗಲೇ 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.
ಆರೋಪಿಗಳು : ರೇಣುಕಾ ಶಂಕರ ಮಾಳಿ. ಶಿವರುದ್ರ ಪ್ರಧಾನಿ ಕುದ್ದೂರಿ, ಕಾಶವ್ವಾ ಶಿವರುದ್ರ ಕುದ್ದೂರಿ, ನೀಲಕಂಠ ಶೇಟ್ಟೆಪ್ಪಾ ಮುದುಪಾಕಿ, ಮೈತ ಅಡಿವೆಪ್ಪಾ ಶೆಟ್ಟೆಪ್ಪಾ ಮುದುಪಾಕಿ, ಸಿದ್ದಯ್ಯಾ ನಿರುಪಾದಯ್ಯಾ ಹಿರೇಮಠ, ಸಾ। ಎಲ್ಲರೂ ಕುರುಣಿ. ಆನಂದ ಎಮ್ ದಡ್ಡಿಮನಿ, ಉಪನೊಂದಣಿ ಅಧಿಕಾರಿಗಳು ಹುಕ್ಕೇರಿ, ಇವರು ಸಂಗನಮತ ಮಾಡಿಕೊಂಡು ಪಿರ್ಯಾದಿ ಹಾಗೂ ಪಿರ್ಯಾದಿಯ ಬಾಹುಬಂದಿರ ಆಸ್ತಿಯನ್ನು ಕಬಳಿಸಲು ಅವರಿಗೆ ಆರ್ಥಿಕ ನಷ್ಟವನ್ನುಂಟು ಮಾಡುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಮಾಹಿತಿಗಳು ಲಭ್ಯವಾಗಿವೆ.
21-05-2025. ಕುರಣಿ ಗ್ರಾಮ ಹದ್ದಿ ಜಮೀನ ರಿ.ಸ.ನಂ: 189/4 ಹಾಗೂ ದಿ.12-06-2025 ರಂದು ರಿ.ಸ.ನಂ: 183/30ಬಿ, ಮತ್ತು 183/13ಅ ನೇದ್ದವುಗಳಿಗೆ ಸಂಬಂದಿಸಿದಂತೆ ಹುಕ್ಕೇರಿ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ಇದರಲ್ಲಿ ಪಿರ್ಯಾದಿ ಹಾಗೂ ಪಿರ್ಯಾದಿಯ ಬಾಹುಬಂದರ ಹೆಸರಿನ ಮುಂದೆ ಆರೋಪಿತರು ಪೋಟೋಗಳನ್ನು ತೆಗೆಯಿಸಿಕೊಂಡು ಅವರ ತೊಟ್ಟಿ ಸಹಿಗಳನ್ನು ಮಾಡಿ ಬಿನ್ ಕಬ್ಬಾ ನೊಂದ ಕರಾರಪತ್ರಗಳನ್ನು ತಯಾರಿಸಿ ಪಿರ್ಯಾದಿಗೆ ಹಾಗೂ ಪಿರ್ಯಾದಿಯ ಬಾಹುಬಂದರಿಗೆ ಮೋಸ ಮಾಡಿರುವ ಬಗ್ಗೆ ಯಮಕನಮರಡಿ ಪೊಲೀಸ ಠಾಣೆ ಯಲ್ಲಿ ದೂರು ದಾಖಲಾಗಿದೆ ಎಂದು ಹೇಳಿದರು.
ಅಪರಾಧ ಸಂಖ್ಯೆ: 26/2026 ಕಲಂ: 318(2), 319(2), 336(2), 336(3), 338, 340(2), 2. 3(6) 2.2.2-2023 ಇದರಲ್ಲಿನ ಆರೋಪಿತರಾದ ನೀಲಕಂಠ ಶೆಟ್ಟೆಪ್ಪಾ ಮುದಪಾಕಿ. ಇವರ ಮನೆಯ ಮೇಲೆ ದಾಳಿ ಮಾಡಿ 09 ನಕಲಿ ಆಧಾರ ಕಾರ್ಡಗಳು 03 ನಕಲಿ ಪಾನ ಕಾರ್ಡಗಳು ಹಾಗು 01 ನಕಲಿ ವೋಟರ ಐ.ಡಿ.ಯನ್ನು ಹೀಗೆ ಒಟ್ಟು 13 ನಕಲಿ ದಾಖಲಾತಿಗಳನ್ನೊಳಗೊಂಡಂತೆ 22 ದಾಖಲಾತಿಗಳನ್ನು ಹಾಗು ಆರೋಪಿತನಾದ ಅಶೋಕ ರತ್ನಪ್ಪಾ ಸೂರ್ಯವಂಶಿ ಇವನ ಸೂರ್ಯವಂಶಿ ಫೋಟೊ ಸ್ಟುಡಿಯೋ ಮೇಲೆ ದಾಳಿ ಮಾಡಿ ನಕಲಿ ದಾಖಲಾತಿಗಳನ್ನು ತಯಾರಿಸಲು ಉಪಯೋಗಿಸಿದ 1 ಕಂಪ್ಯೂಟರ, 1 ಲ್ಯಾಪಟಾಪ, 1 ಕ್ಯಾಮರಾ, 2 ಪ್ರಿಂಟರ ಹಾಗು 1 ಲ್ಯಾಮಿನೇಶನ ಮಶೀನ ಒಳಗೊಂಡಂತೆ ಒಟ್ಟು 06 ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಉಪನೊಂದಣಿ ಅಧಿಕಾರಿ ಮಡಿವಾಳಯ್ಯಾ ಬಸವರಾಜ ಬಾನಿಮಠ ಹಾಗು ಆನಂದ ಮಹಾದೇವ ದಡ್ಡಿಮನಿ ಇವರು ಮಾನ್ಯ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನನ್ನು ಪಡೆದುಕೊಂಡು ಬಂದು ಫೆಬ್ರುವರಿ ದಿ.08 ರಂದು ಯಮಕನಮರಡಿ ಪೊಲೀಸ ಠಾಣೆಯಲ್ಲಿ ಹಾಜರಾಗಿದ್ದಾರೆ ಎಂದು ತಿಳಿಸಿದರು.



