April 17, 2026
Friday, April 17, 2026
spot_img

ಸರಕಾರ ಬಂದು ಮೂರು ವರ್ಷವಾಗಿದೆ ಇಲ್ಲಿಯವರೆಗೂ ಒಂದು ಕೋಮು ಗಲಭೆಯಾಗಿಲ್ಲ: ಡಾ. ಜಿ. ಪರಮೇಶ್ವರ

ಹೊಸದಿಗಂತ ವರದಿ ಬೆಳಗಾವಿ :

ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಕೋಮು ಗಲಭೆಗಳು ನಡೆದಿಲ್ಲ, ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.
ಶುಕ್ರವಾರ ಬೆಳಗಾವಿ ನಗರದಲ್ಲಿ ಪೊಲೀಸ್ ಕಟ್ಟಡಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭ ಉದ್ಘಾಟಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದು ಮೂರು ವರ್ಷವಾಗಿದೆ. ಇಲ್ಲಿಯವರೆಗೂ ಒಂದು ಕೋಮು ಗಲಭೆಯಾಗಿಲ್ಲ. ನಮ್ಮ ಪೊಲೀಸ್ ಇಲಾಖೆ ಒಳ್ಳೆಯ ರೀತಿ ಕೆಲಸ ಮಾಡುತ್ತಿವೆ ಎಂದರು.

ರಾಜ್ಯದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ತಂದು ಹಂಚುವ ಪ್ರಯತ್ನ ನಡೆದಿದೆ. ಆ ಸಂಚನ್ನು ಮಟ್ಟಹಾಕಲು ನಮ್ಮ ಸರಕಾರ ಡ್ರಗ್ಸ್ ಹಂಚುವವರು, ಸರಬರಾಜು ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲಾಗಿದೆ. ಒಂದು ವರ್ಷದಲ್ಲಿ ಸಾವಿರಾರು ಕೋಟಿ ರೂ. ಡ್ರಗ್ಸ್ ಸುಟ್ಟು ಹಾಕಿದ್ದೇವೆ. ಇದನ್ನು ಸವಾಲ್ ಆಗಿ ಸ್ವೀಕರಿಸಿ ಅದನ್ನು ಮಟ್ಟ ಹಾಕುತ್ತೇವೆ ಎಂದರು.

ಸಮಾಜದ ವಿರುದ್ಧವಾಗಿ ಕೆಲಸ ಮಾಡುತ್ತಾರೆ. ಅವರ ವಿರುದ್ಧ ಮುಲ್ಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದರು.
ಪೊಲೀಸರು ಶಾಲಾ, ಕಾಲೇಜುಗಳಲ್ಲಿ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಡ್ರಗ್ಸ್ ವಿಚಾರದಲ್ಲಿ ನಾವು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.

ಇತ್ತೀಚೆಗೆ ಸಾಮಾನ್ಯ ಕ್ರೈಮ್ ಕಡಿಮೆಯಾಗುತ್ತಿವೆ. ಸೈಬರ್ ಕ್ರೈಮ್ ಹೆಚ್ಚಾಗಿವೆ. ನಿವೃತ್ತ ಹೊಂದಿದವರ ಖಾತೆಯಲ್ಲಿ ನೋಡಿ ಸೈಬರ್ ವಂಚಕರು ಹೊಂಚು ಹಾಕುತ್ತಿದ್ದಾರೆ. ಅದನ್ನು ತಡೆಯವ ಪ್ರಯತ್ನ ಮಾಡುತ್ತಿದ್ದೇವೆ. ಸೈಬರ್ ಕ್ರೈಮ್ ತಡೆಯುವ ಪ್ರಯತ್ನ ನಮ್ಮ ತಂತ್ರಜ್ಞಾನದಿಂದ ತಡೆ ಹಿಡಿಯಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಸೈಬರ್ ಲ್ಯಾಬ್ ಮಾಡಿ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಗಳಿಗೆ ತರಬೇತಿ ನೀಡಲು ಸೂಚನೆ ನೀಡಿದ್ದೇವೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !