February 11, 2026
Wednesday, February 11, 2026
spot_img

Cleaning Tips | ಕಿಟಕಿ ಗಾಜುಗಳನ್ನು ಫಳಫಳ ಅಂತ ಹೊಳೆಯೋ ಹಾಗೆ ಮಾಡೋಕೆ ಇಲ್ಲಿದೆ ಟ್ರಿಕ್ಸ್!

ಒಮ್ಮೆ ಕಿಟಕಿಯ ಗಾಜು ಚನ್ನಾಗಿ ಕ್ಲೀನ್ ಮಾಡಿದ್ರೆ, ಮನೆ ತುಂಬಾ ಹೊಸದಾಗಿ ಕಾಣಿಸುತ್ತೆ ಅಲ್ವಾ. ಹೊರಗಿನ ಬೆಳಕು ಒಳಗೆ ಬರುವಾಗ ಆ ಗಾಜು ಫಳಫಳ ಹೊಳೆಯೋದು ಮನಸ್ಸಿಗೂ ಒಂದು ಫ್ರೆಶ್ ಫೀಲಿಂಗ್ ಕೊಡುತ್ತೆ. ಆದರೆ ಗಾಜಿನ ಮೇಲೆ ಧೂಳು, ಬೆರಳ ಗುರುತು, ನೀರಿನ ಕಲೆಗಳು ಬಿದ್ದರೆ ಅದರ ಸೌಂದರ್ಯವೇ ಮಸುಕಾಗಿಬಿಡುತ್ತೆ. ಅದಕ್ಕೇ ಸ್ವಲ್ಪ ಗಮನ ಕೊಟ್ಟರೆ ಸಾಕು, ಗಾಜು ಕನ್ನಡಿಯಂತೆ ಕ್ಲೀನ್ ಆಗಿ ಮಿನುಗುತ್ತೆ.

ಗಾಜು ತೊಳೆಯುವಾಗ ನೀರಿಗೆ ಸ್ವಲ್ಪ ವಿನಿಗರ್ ಅಥವಾ ನಿಂಬೆರಸ ಸೇರಿಸಿ ಒರೆಸಿದ್ರೆ, ಹಳೆಯ ಕಲೆಗಳು ಸುಲಭವಾಗಿ ಮಾಯವಾಗುತ್ತವೆ. ಸಾಫ್ಟ್ ಬಟ್ಟೆ ಅಥವಾ ನ್ಯೂಸ್ ಪೇಪರ್ ಬಳಸಿ ನಿಧಾನವಾಗಿ ತೊಳೆಯೋದರಿಂದ ಸ್ಟ್ರೈಪ್ ಮಾರ್ಕ್ಸ್ ಬರೋದಿಲ್ಲ.

ಇದನ್ನೂ ಓದಿ:

ಇನ್ನೊಂದು ಸುಲಭ ವಿಧಾನ ಅಂದ್ರೆ, ನಿಂಬೆರಸ ಮತ್ತು ನೀರು ಮಿಶ್ರಣ ಮಾಡಿ ಸ್ಪ್ರೇ ಮಾಡಿದ್ರೆ ಗಾಜು ಕ್ಲೀನ್ ಆಗುವುದಲ್ಲದೆ, ಚೆನ್ನಾಗಿ ಹೊಳೆಯುತ್ತೆ ಕೂಡ.

ಇನ್ನೊಂದು ಸಣ್ಣ ಟ್ರಿಕ್ ಎಂದರೆ, ಬಿಸಿಲು ಜಾಸ್ತಿ ಇರುವ ಸಮಯದಲ್ಲಿ ಗಾಜು ಕ್ಲೀನ್ ಮಾಡ್ಬೇಡಿ. ಆಗ ನೀರು ಬೇಗ ಒಣಗಿ ಕಲೆ ಬಿಟ್ಟು ಉಳಿಯುತ್ತೆ. ಬೆಳಿಗ್ಗೆ ಅಥವಾ ಸಂಜೆ ತೊಳೆಯೋದರಿಂದ ಗಾಜು ಹೆಚ್ಚು ಕ್ಲೀನ್ ಆಗಿ ಹೊಳೆಯುತ್ತೆ. ಈ ಚಿಕ್ಕ ಚಿಕ್ಕ ಹ್ಯಾಬಿಟ್‌ಗಳು ನಿಮ್ಮ ಮನೆಯ ಕಿಟಕಿ ಗಾಜಿಗೆ ಹೊಸ ಲುಕ್ ಕೊಡುತ್ತವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !