ಬೆಳಗ್ಗೆ ಎದ್ದ ಕೂಡಲೇ ಕಾಫಿ ಅಥವಾ ಟೀ ಕುಡಿಯೋ ಅಭ್ಯಾಸ ಬಹುತೇಕ ಎಲ್ಲರಿಗೂ ಇದೆ. ಕೆಲವರು ಅದೇ ಸಮಯದಲ್ಲಿ ಮಾತ್ರೆ ಕೂಡ ತೆಗೆದುಕೊಳ್ಳುತ್ತಾರೆ. ಆದರೆ ಈ ಚಿಕ್ಕ ಅಭ್ಯಾಸ ದೇಹಕ್ಕೆ ದೊಡ್ಡ ಸಮಸ್ಯೆ ತರಬಹುದು ಅನ್ನೋದು ಗೊತ್ತೇ ಇರೋದಿಲ್ಲ. ಔಷಧಿ ಸರಿಯಾಗಿ ಕೆಲಸ ಮಾಡಬೇಕಾದರೆ ಅದನ್ನು ನೀರಿನ ಜೊತೆ ತೆಗೆದುಕೊಳ್ಳುವುದು ಅತ್ಯುತ್ತಮ. ಕಾಫಿ–ಟೀ ಜೊತೆ ಮಾತ್ರೆ ತೆಗೆದುಕೊಳ್ಳುವುದರಿಂದ ದೇಹದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.
ಕಾಫಿ ಟೀ ಜೊತೆ ಮಾತ್ರೆ ಯಾಕೆ ಕುಡಿಬಾರ್ದು ಗೊತ್ತಾ?
- ಕಾಫಿಯಲ್ಲಿರುವ ಕ್ಯಾಫಿನ್ ಔಷಧಿಯ ಪರಿಣಾಮವನ್ನು ಕಡಿಮೆ ಮಾಡಬಹುದು ಅಥವಾ ಹೆಚ್ಚಿಸಬಹುದು.
- ಟೀ ಜೊತೆ ಮಾತ್ರೆ ತೆಗೆದುಕೊಂಡರೆ ಹೊಟ್ಟೆ ಉರಿಯೂತ, ಅಜೀರ್ಣ ಉಂಟಾಗಬಹುದು.
- ಕೆಲವು ಮಾತ್ರೆಗಳು ಸರಿಯಾಗಿ ಜೀರ್ಣವಾಗದೆ ದೇಹಕ್ಕೆ ಪ್ರಯೋಜನ ಕಡಿಮೆ ಕೊಡಬಹುದು.
- ಹೃದಯ ಬಡಿತ ವೇಗವಾಗಿ ಆಗುವುದು, ನಡುಕ, ತಲೆ ಸುತ್ತುವಿಕೆ ಕಂಡುಬರುವ ಸಾಧ್ಯತೆ ಇದೆ.
- ವೈದ್ಯರು ಸೂಚಿಸಿದ ರೀತಿಯಲ್ಲಿ ನೀರಿನ ಜೊತೆ ಮಾತ್ರೆ ತೆಗೆದುಕೊಂಡರೆ ಮಾತ್ರ ಸುರಕ್ಷಿತ.
ಚಿಕ್ಕದಾಗಿ ಕಾಣಿಸುವ ಈ ಅಭ್ಯಾಸ, ದೇಹಕ್ಕೆ ದೊಡ್ಡ ಸಮಸ್ಯೆ ತರಬಹುದು. ಆದ್ದರಿಂದ ಕಾಫಿ–ಟೀ ಬೇರೆ, ಮಾತ್ರೆ ಬೇರೆ ಸಮಯದಲ್ಲಿ ತೆಗೆದುಕೊಳ್ಳುವುದು ಉತ್ತಮ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)



