October 18, 2026
Sunday, October 18, 2026
spot_img

ಟಿಕೆಟ್ ಕಳ್ಳದಂಧೆಗೆ ಬ್ರೇಕ್: 3 ಕೋಟಿ ಖಾತೆಗಳನ್ನು ಬಂದ್ ಮಾಡಿದ ರೈಲ್ವೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೈಲು ಪ್ರಯಾಣಿಕರಿಗೆ ಕನ್ಫರ್ಮ್ ಟಿಕೆಟ್ ಸಿಗುವಿಕೆ ಸುಲಭವಾಗಿಸಲು ಭಾರತೀಯ ರೈಲ್ವೆ ಮತ್ತು ಐಆರ್‌ಸಿಟಿಸಿ ದೇಶವ್ಯಾಪಿ ಶುದ್ಧೀಕರಣ ಅಭಿಯಾನ ಕೈಗೊಂಡಿವೆ. ಈ ಕ್ರಮದಡಿ ಸುಮಾರು 3 ಕೋಟಿಗೂ ಹೆಚ್ಚು ನಕಲಿ ಹಾಗೂ ಅನುಮಾನಾಸ್ಪದ ಬಳಕೆದಾರ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಅನಧಿಕೃತ ಏಜೆಂಟ್‌ಗಳು ಮತ್ತು ದಲ್ಲಾಳಿಗಳು ನೂರಾರು ಖಾತೆಗಳನ್ನು ಸೃಷ್ಟಿಸಿ, ವಿಶೇಷವಾಗಿ ಹಬ್ಬದ ಸೀಸನ್ ಮತ್ತು ತತ್ಕಾಲ್ ಬುಕ್ಕಿಂಗ್ ವೇಳೆ ಟಿಕೆಟ್‌ಗಳನ್ನು ಕ್ಷಣಾರ್ಧದಲ್ಲಿ ಕಬಳಿಸುತ್ತಿದ್ದರೆಂಬ ಆರೋಪಗಳು ಇದ್ದವು. ಒಂದೇ ಐಪಿ ವಿಳಾಸದಿಂದ ಅನೇಕ ಖಾತೆಗಳನ್ನು ಬಳಸಿದ ಪ್ರಕರಣಗಳು, ಮೊಬೈಲ್ ಮತ್ತು ಇಮೇಲ್ ದೃಢೀಕರಣ ಮಾಡದ ಖಾತೆಗಳು ಹಾಗೂ ಕೆವೈಸಿ ಪೂರ್ಣಗೊಳಿಸದ ಐಡಿಗಳು ಈ ಕ್ರಮಕ್ಕೆ ಗುರಿಯಾಗಿವೆ.

ಇದನ್ನೂ ಓದಿ:

ಈ ಕ್ರಮದಿಂದ ವೆಬ್‌ಸೈಟ್ ಟ್ರಾಫಿಕ್ ಕಡಿಮೆಯಾಗಿದ್ದು, ಸಾಮಾನ್ಯ ಪ್ರಯಾಣಿಕರಿಗೆ ಟಿಕೆಟ್ ಬುಕ್ ಮಾಡುವಲ್ಲಿ ಹೆಚ್ಚಿನ ಅವಕಾಶ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರು ತಮ್ಮ ಖಾತೆಗೆ ಆಧಾರ್ ಲಿಂಕ್ ಮಾಡುವುದು ಹಾಗೂ ಮೊಬೈಲ್-ಇಮೇಲ್ ಪರಿಶೀಲನೆ ಪೂರ್ಣಗೊಳಿಸುವುದು ಅವಶ್ಯಕ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Must Read