February 16, 2026
Monday, February 16, 2026
spot_img

ಸೋಲಿನಿಂದ ಬಳಲಿ ಬೆಂಡಾದ ‘ಪಾಕ್’ ಪಾಳಯ: ಡ್ರೆಸ್ಸಿಂಗ್ ರೂಂ ಸ್ಥಿತಿ ಬಿಚ್ಚಿಟ್ಟ ಕೋಚ್ ಮೈಕ್ ಹೆಸ್ಸನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

T20 ವಿಶ್ವಕಪ್ 2026 ಪಂದ್ಯದಲ್ಲಿ 61 ರನ್ ಅಂತರದ ಸೋಲು ಕಂಡ ಪಾಕಿಸ್ತಾನ ತಂಡದ ಪಾಳಯದಲ್ಲಿ ನಿರಾಶೆ ಮಡುಗಟ್ಟಿದೆ. ಈ ಸೋಲಿನ ಬಳಿಕ ತಂಡದ ಸ್ಥಿತಿ ಹೇಗಿದೆ ಎಂಬುದನ್ನು ಮುಖ್ಯ ಕೋಚ್ ಮೈಕ್ ಹೆಸ್ಸನ್ ವಿವರಿಸಿದ್ದಾರೆ ಇಲ್ಲಿ ನೋಡಿ.

ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲ ಆಟಗಾರರೂ ತುಂಬಾ ನೊಂದಿದ್ದಾರೆ. ಭಾರತ ವಿರುದ್ಧದ ಪಂದ್ಯ ಪಾಕಿಸ್ತಾನಕ್ಕೆ ಎಷ್ಟು ಮಹತ್ವದ್ದೋ ಎಲ್ಲರಿಗೂ ಗೊತ್ತಿದೆ. ಅದರಿಂದಲೇ ಸೋಲು ಅವರನ್ನು ಬೇಸರಗೊಳಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಪಂದ್ಯಕ್ಕೂ ಮುನ್ನ ನಾವು ಸತತ 5 ಪಂದ್ಯಗಳನ್ನು ಗೆದ್ದಿದ್ದೆವು. ಆತ್ಮವಿಶ್ವಾಸವೂ ಚೆನ್ನಾಗಿತ್ತು. ಆದರೆ ಈ ಪಂದ್ಯದಲ್ಲಿ ಎದುರಾಳಿ ಎಲ್ಲ ವಿಭಾಗಗಳಲ್ಲೂ ಮೇಲುಗೈ ಸಾಧಿಸಿತು ಎಂದು ಒಪ್ಪಿಕೊಂಡರು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ನಿರ್ಧಾರ ಸರಿಯೇ ಆಗಿತ್ತು. ಆರಂಭದಲ್ಲಿ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುತ್ತಿತ್ತು. ಆದರೆ ಇಶಾನ್ ಕಿಶನ್ 77 ರನ್ ಗಳಿಸಿ ಪಂದ್ಯದ ದಾರಿಯನ್ನೇ ಬದಲಿಸಿದರು ಎಂದು ಹೇಳಿದರು.

176 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ, ಜಸ್ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿ 114 ರನ್‌ಗಳಿಗೆ ಆಲೌಟ್ ಆಯಿತು. ಈ ಸೋಲಿನ ನಂತರ ಟೂರ್ನಿಯಲ್ಲಿ ಉಳಿಯಲು ನಮೀಬಿಯಾ ವಿರುದ್ಧ ನಡೆಯುವ ಮುಂದಿನ ಪಂದ್ಯದಲ್ಲಿ ಗೆಲ್ಲುವುದು ಕಡ್ಡಾಯವಾಗಿದೆ. ಈ ಸೋಲಿನಿಂದ ಪಾಠ ಕಲಿತು ಮತ್ತೆ ಬಲವಾಗಿ ಮರಳುವ ವಿಶ್ವಾಸ ಇದೆ ಎಂದು ಹೆಸ್ಸನ್ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !