February 16, 2026
Monday, February 16, 2026
spot_img

ನಾಳೆ ವರ್ಷದ ಮೊದಲ ಕಂಕಣ ಸೂರ್ಯಗ್ರಹಣ: ಎಲ್ಲೆಲ್ಲಿ ಗೋಚರ? ನಾವು-ನೀವು ನೋಡ್ಬಹುದಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಕಾಶದಲ್ಲಿ ಅಪರೂಪವಾಗಿ ಕಾಣಿಸುವ ಖಗೋಳ ಘಟನೆಗಳಲ್ಲಿ ಒಂದಾದ ಕಂಕಣ ಸೂರ್ಯಗ್ರಹಣ 2026ರ ಫೆಬ್ರವರಿ 17ರಂದು ಸಂಭವಿಸಲಿದೆ. ಮಂಗಳವಾರ ಮಧ್ಯಾಹ್ನದಿಂದ ಸಂಜೆವರೆಗೆ ನಡೆಯಲಿರುವ ಈ ಅಪರೂಪದ ಖಗೋಳ ಘಟನೆಯ ದೃಶ್ಯವು ಕೆಲವು ದೇಶಗಳಲ್ಲಿ ಮಾತ್ರ ಗೋಚರಿಸಲಿದ್ದು, ಅನೇಕರು ಆಸಕ್ತಿಯಿಂದ ಕಾಯುತ್ತಿರುವ ವಿಶೇಷ ಕ್ಷಣವಾಗಲಿದೆ.

ಈ ಸೂರ್ಯಗ್ರಹಣ ಮಂಗಳವಾರ ಮಧ್ಯಾಹ್ನ 3:26ರಿಂದ ಆರಂಭವಾಗಿ ಸಂಜೆ 7:57ರವರೆಗೆ ನಡೆಯಲಿದೆ. ಸುಮಾರು 2 ನಿಮಿಷ 20 ಸೆಕೆಂಡುಗಳ ಕಾಲ ಚಂದ್ರನು ಸೂರ್ಯನ ಮಧ್ಯಭಾಗವನ್ನು ಮುಚ್ಚುವ ಮೂಲಕ ವಿಶೇಷ ದೃಶ್ಯ ಮೂಡುತ್ತದೆ. ಆದರೆ ಈ ಗ್ರಹಣ ಭಾರತ ನಲ್ಲಿ ಗೋಚರಿಸುವುದಿಲ್ಲ ಎಂಬುದು ಖಗೋಳ ವಿಜ್ಞಾನಿಗಳ ಮಾಹಿತಿ.

ಇದನ್ನೂ ಓದಿ:

ಈ ಕಂಕಣ ಸೂರ್ಯಗ್ರಹಣವನ್ನು “ಅಗ್ನಿ ಉಂಗುರ” ಎನ್ನುವ ಹೆಸರಿನಿಂದಲೂ ಕರೆಯುತ್ತಾರೆ. ಚಂದ್ರನು ಭೂಮಿಯಿಂದ ದೂರದ ಹಂತದಲ್ಲಿರುವಾಗ ಸೂರ್ಯನನ್ನು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗದೆ, ಅದರ ಸುತ್ತಲೂ ಬೆಳಕಿನ ಉಂಗುರದಂತೆ ಕಾಣುತ್ತದೆ. ಇದೇ ದೃಶ್ಯಕ್ಕೆ ಈ ಹೆಸರು ಬಂದಿದೆ ಎಂದು ನಾಸಾ ವಿವರಿಸಿದೆ.

ಈ ಘಟನೆ ಅಂಟಾರ್ಟಿಕಾ ಹಾಗೂ ದಕ್ಷಿಣ ಆಫ್ರಿಕಾ ಸೇರಿದಂತೆ ಆಫ್ರಿಕಾ ಖಂಡದ ಹಲವೆಡೆ ಗೋಚರಿಸಲಿದೆ. ಜೊತೆಗೆ ಟಾಂಜಾನಿಯಾ, ಜಾಂಬಿಯಾ ಮತ್ತು ಜಿಂಬಾಬ್ವೆ ದೇಶಗಳಲ್ಲಿ ಆಕಾಶ ವೀಕ್ಷಕರು ಈ ಅದ್ಭುತವನ್ನು ವಿಶೇಷ ಸಾಧನಗಳ ಮೂಲಕ ಗಮನಿಸಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !