ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂತಹ ಸುದ್ದಿಗಳನ್ನು ಓದಿದಾಗ ಅಥವಾ ಕೇಳಿದಾಗ ಭೂಮಿಯ ಮೇಲೆ ಎಂತೆಂಥಾ ರೀತಿಯ ಜನರು ಇರುತ್ತಾರೆ, ಎಂಥ ಕೆಟ್ಟ ಜಗತ್ತಿನಲ್ಲಿ ಬದುಕುತ್ತಿದ್ದೇವಾ ಎಂದು ಜುಗುಪ್ಸೆ ಬರುತ್ತದೆ. ಇಲ್ಲೊಬ್ಬ ಯುವಕ ತನ್ನ ಗರ್ಲ್‌ಫ್ರೆಂಡ್‌ನ್ನು ಭೀಕರವಾಗಿ ಕೊಲೆ ಮಾಡಿ ಖುಷಿಪಟ್ಟಿದ್ದಾನೆ.
ಈ ಘಟನೆಯಿಂದಾಗಿ ಇಡೀ ಮುಂಬೈ ಹೆದರಿದೆ. ಬಾಯ್‌ಫ್ರೆಂಡ್ ಮಾಡಿಕೊಳ್ಳಲು ಹೆಣ್ಣುಮಕ್ಕಳು ಹೆದರುವಂತಾಗಿದೆ.
ಇಂದೋರ್‌ನ ದ್ವಾರಕಾಪುರಿಯ ಎಂಬಿಎ ವಿದ್ಯಾರ್ಥಿ ಪಿಯೂಷ್ ಧಮ್ನೋಟಿಯಾ ತನ್ನ ಗರ್ಲ್‌ಫ್ರೆಂಡ್‌ನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಸರ್ಪ್ರೈಸ್ ಎಂದು ಹೇಳಿ ಆಕೆಯ ಉಸಿರುಗಟ್ಟಿಸಿ ಎದೆಯ ಮೇಲೆ ಕುಳಿತು ಚಾಕು ಮುರಿಯುವವರೆಗೂ ಇರಿದು ಚಿತ್ರಹಿಂಸೆ ನೀಡಿ ಕೊಂದಿದ್ದಾನೆ.
ಆಗಿದ್ದೇನು?
ಪಿಯೂಷ್ ತನ್ನ ಗರ್ಲ್‌ಫ್ರೆಂಡ್‌ಗೆ ಸೆಕ್ಸ್‌ಗಾಗಿ ಒತ್ತಾಯಿಸಿದ್ದಾನೆ. ಆದರೆ ಆಕೆ ನನಗೆ ಹುಷಾರಿಲ್ಲ ಬೇಡ ಎಂದು ಜರಿದಿದ್ದಾಳೆ. ಇದರಿಂದ ಕೋಪಗೊಂಡು ಅವಳ ಮೇಲೆ ಹಲ್ಲೆ ಮಾಡಿದ್ದಾನೆ, ಹಗ್ಗದಿಂದ ಅವಳನ್ನು ಕಟ್ಟಿಹಾಕಿದ್ದಾನೆ. ಕಣ್ಣಿಗೂ ಬಟ್ಟೆ ಕಟ್ಟಿ ಸರ್ಪ್ರೈಸ್ ನೀಡುತ್ತೇನೆ ಎಂದಿದ್ದಾನೆ.
ಇದ್ಯಾವುದೂ ಆಕೆಗೆ ಇಷ್ಟವಾಗಿಲ್ಲ. ಆಕೆ ನಿರಾಕರಿಸಿದ್ದಕ್ಕೆ ಇನ್ನಷ್ಟು ಸಿಟ್ಟಿಗೆದ್ದು ಆಕೆಯ ಎದೆಯ ಮೇಲೆ ಕುಳಿತುಕೊಂಡಿದ್ದಾನೆ. ಉಸಿರುಗಟ್ಟುವವರೆಗೂ ಬಾಯನ್ನು ಮುಚ್ಚಿದ್ದಾನೆ. ಸತ್ತು ಹೋಗಿದ್ದಾಳೆ ಎಂದುಕೊಂಡು ಚಾಕುವಿನಿಂದ ಆಕೆಯ ಎದೆಗೆ ಹತ್ತಾರು ಬಾರಿ ಗಟ್ಟಿಯಾಗಿ ಇರಿದಿದ್ದಾನೆ. ಚಾಕು ಮುರಿದುಹೋಗಿದೆ. ಇಷ್ಟೆಲ್ಲ ಆದಮೇಲೆ ಆಕೆಯ ಮೃತದೇಹವನ್ನು ಅಲ್ಲೇ ಬಿಟ್ಟು ಮದ್ಯದ ಅಂಗಡಿಗೆ ಹೋಗಿ ಬಿಯರ್ ಖರೀದಿಸಿದ್ದಾನೆ. ಯುಟ್ಯೂಬ್‌ನಲ್ಲಿ ಆತ್ಮವನ್ನು ಕರೆಯುವುದು ಹೇಗೆ ಎಂದು ಸರ್ಚ್ ಕೂಡ ಮಾಡಿದ್ದಾನೆ.
ನಂತರ ಆಕೆಯ ಮೃತದೇಹದ ಜೊತೆ ಸೆಕ್ಸ್ ಮಾಡಿ, ಬೆತ್ತಲೆ ದೇಹವನ್ನು ಹಾಗೇ ಬಿಟ್ಟು ಹೋಗಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಮನೆಗೆ ಬರೋದು ತಡವಾಗುತ್ತೆ ಎಂದು ಮೆಸೇಜ್ ಮಾಡಿದ್ಲು!
ವಿದ್ಯಾರ್ಥಿನಿ ಆಧಾರ್ ಕಾರ್ಡ್ ಸರಿಪಡಿಸಲು ಹೋಗುತ್ತಿರುವುದಾಗಿ ಮನೆಯಲ್ಲಿ ಹೇಳಿದ್ದಳು. ತಂಗಿಗೆ ಕರೆ ಮಾಡಿ ಪಿಯೂಷ್ ಬರ್ಥ್‌ಡೇ ಪಾರ್ಟಿ ಇದೆ ಮನೆಗೆ ಬರೋದು ಲೇಟಾಗುತ್ತದೆ ಎಂದು ಹೇಳಿದ್ದಳು. ರಾತ್ರಿ ೧೧ ಗಂಟೆ ನಂತರ ತಂದೆಗೆ ನಾನು ಮನೆಗೆ ಬರೋದಿಲ್ಲ ಎಂದು ಮೆಸೇಜ್ ಮಾಡಿದ್ದಾಳೆ. ನಂತರ ಫೋನ್ ಸ್ವಿಚ್ ಆಫ್ ಆಗಿದೆ. ನಂತರ ವಿದ್ಯಾರ್ಥಿನಿ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಅವಳದೇ ತಪ್ಪು ಎಂದ ಪಿಯೂಷ್!
ನಾನು ಮದುವೆಯಾಗೋಣ ಅಂದೆ. ಆದರೆ ಅವಳಿಗೆ ಅದು ಇಷ್ಟವಿರಲಿಲ್ಲ. ಹದಿನೈದು ದಿನದಿಂದ ನನ್ನ ಜೊತೆ ಮಾತನಾಡುತ್ತಿರಲಿಲ್ಲ. ಬೇರೆ ಹುಡುಗನ ಜೊತೆ ಮಾತುಕತೆ ನಡೆಸಿದ್ದಳು. ಸಿಟ್ಟಿತ್ತು ಅದಕ್ಕೆ ಕೊಲೆ ಮಾಡಿದೆ ಎಂದಿದ್ದಾನೆ.



