February 17, 2026
Tuesday, February 17, 2026
spot_img

ರಣಜಿ ಟೂರ್ನಿ | ‘ಶಮಿ ಬಿರುಗಾಳಿ’ಗೆ ಸಿಲುಕಿದ ಜಮ್ಮು ಕಾಶ್ಮೀರ: ವಿಕೆಟ್ ಮೇಲೆ ವಿಕೆಟ್ ಉಡೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ತಮ್ಮ ಅದ್ಭುತ ಬೌಲಿಂಗ್ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ಬೆಂಗಾಲ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಈ ಪ್ರಮುಖ ಮುಖಾಮುಖಿಯಲ್ಲಿ ಜಮ್ಮು–ಕಾಶ್ಮೀರ ಮತ್ತು ಬೆಂಗಾಲ್ ತಂಡಗಳು ಕಣಕ್ಕಿಳಿದಿದ್ದವು. ಟಾಸ್ ಗೆದ್ದ ಜಮ್ಮು–ಕಾಶ್ಮೀರ ಮೊದಲು ಬೌಲಿಂಗ್ ಆಯ್ದುಕೊಂಡು ಬೆಂಗಾಲ್ ತಂಡವನ್ನು 328 ರನ್‌ಗಳಿಗೆ ಆಲೌಟ್ ಮಾಡಿತು.

ಆದರೆ ನಂತರ ಮೊದಲ ಇನಿಂಗ್ಸ್ ಆರಂಭಿಸಿದ ಜಮ್ಮು–ಕಾಶ್ಮೀರಕ್ಕೆ ಶಮಿ ಭಾರೀ ಆಘಾತ ನೀಡಿದರು. ಆರಂಭದಿಂದಲೇ ಅದ್ಭುತ ದಾಳಿ ನಡೆಸಿದ ಅವರು ಬ್ಯಾಟ್ಸ್‌ಮನ್‌ಗಳಿಗೆ ಒಂದರ ಹಿಂದೆ ಒಂದರಂತೆ ಪೆವಿಲಿಯನ್ ದಾರಿ ತೋರಿಸಿದರು. ಪರಿಣಾಮ ಜಮ್ಮು–ಕಾಶ್ಮೀರ ತಂಡ 302 ರನ್‌ಗಳಿಗೆ ಸೀಮಿತವಾಯಿತು.

ಇದನ್ನೂ ಓದಿ:

ಈ ಪಂದ್ಯದಲ್ಲಿ ಶಮಿ 22.1 ಓವರ್‌ಗಳಲ್ಲಿ 90 ರನ್ ನೀಡಿ ಒಟ್ಟು 8 ವಿಕೆಟ್ ಕಬಳಿಸಿ ಭರ್ಜರಿ ಸಾಧನೆ ಮಾಡಿದರು. ಇದು ಅವರ ಫಸ್ಟ್ ಕ್ಲಾಸ್ ಕ್ರಿಕೆಟ್ ಜೀವನದ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದ್ದು, ಇದಕ್ಕೂ ಮುನ್ನ 79 ರನ್ ನೀಡಿ 7 ವಿಕೆಟ್ ಪಡೆದಿದ್ದೇ ಅವರ ಶ್ರೇಷ್ಠ ಸಾಧನೆ ಆಗಿತ್ತು.

ಈ ಬಾರಿ 8 ವಿಕೆಟ್ ಗಳಿಸುವ ಮೂಲಕ ಶಮಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಪ್ರದರ್ಶನದೊಂದಿಗೆ ಮುಂದಿನ ದಿನಗಳಲ್ಲಿ ಭಾರತ ಟೆಸ್ಟ್ ತಂಡಕ್ಕೆ ಮತ್ತೆ ಅವಕಾಶ ಸಿಗಬಹುದೇ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !