February 17, 2026
Tuesday, February 17, 2026
spot_img

ಭಾರತದಲ್ಲೂ ಮಕ್ಕಳಿಗೆ ಸೋಷಿಯಲ್​ ಮೀಡಿಯಾ ಬ್ಯಾನ್? ಈ ಕುರಿತು ಅಶ್ವಿನಿ ವೈಷ್ಣವ್ ಏನಂದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದ ಮಾದರಿಯಲ್ಲಿ ಭಾರತದಲ್ಲೂ ಹದಿಹರೆಯದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿರ್ಬಂಧ ಹೇರಲು ಚರ್ಚೆ ನಡೆಯುತ್ತಿದೆ ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಹೇಳಿದ್ದಾರೆ.

AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಮಾತನಾಡಿದ ಸಚಿವರು,ವಯಸ್ಸಿನ ಆಧಾರದ ಮೇಲೆ ಸಾಮಾಜಿಕ ಜಾಲತಾಣ ಬಳಕೆ ಮೇಲೆ ನಿಯಂತ್ರಣ ಇರಬೇಕೆಂದು ಅನೇಕ ದೇಶಗಳು ಈಗ ಒಪ್ಪಿಕೊಂಡಿರುವ ವಿಷಯವಾಗಿದೆ. ಇದೀಗ ವಿವಿಧ ಸೋಶಿಯಲ್ ಮೀಡಿಯಾಗಳಲ್ಲಿ ವಯಸ್ಸಿನ ಆಧಾರದ ಮೇಲೆ ನಿಷೇಧ, ಡೀಪ್ ಫೇಕ್ ಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಇದು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸಮಸ್ಯೆಯಾಗಿದೆ. ಖಂಡಿತವಾಗಿಯೂ ನಮ್ಮ ಮಕ್ಕಳನ್ನು ರಕ್ಷಿಸುವ ಅವಶ್ಯಕತೆಯಿದೆ, ಈ ಹಾನಿಗಳಿಂದ ನಮ್ಮ ಸಮಾಜವನ್ನು ರಕ್ಷಿಸಬೇಕಾಗಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.

ಡಿಸೆಂಬರ್ ನಿಂದ ಆಸ್ಟ್ರೇಲಿಯಾ 16 ವರ್ಷದೊಳಗಿನವರಿಗೆ ಟಿಕ್ ಟಾಕ್, ಯು ಟ್ಯೂಬ್, ಸ್ನ್ಯಾಪ್‌ಚಾಟ್ ಮತ್ತಿತರ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸಿದೆ. ಇಲ್ಲದಿದ್ದರೆ ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ. ಈ ಮಧ್ಯೆ 15 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಸೂದೆಯನ್ನು ಫ್ರೆಂಚ್ ಜನಪ್ರತಿನಿಧಿಗಳು ಕಳೆದ ತಿಂಗಳು ಅಂಗೀಕರಿಸಿದರು. ಇದು ಸೆನೆಟ್ ಮತದಾನಕ್ಕಾಗಿ ಕಾಯುತ್ತಿದೆ.

ಇತ್ತ ಭಾರತದಲ್ಲೂ ಆಂಧ್ರಪ್ರದೇಶದ ಸಚಿವರೊಬ್ಬರು ಈ ಹಿಂದೆ ಸಾಮಾಜಿಕ ಮಾಧ್ಯಮವನ್ನು ಬಳಸುವ ಮಕ್ಕಳನ್ನು ನಿಷೇಧಿಸಲು ಕಾನೂನು ಜಾರಿಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !