February 18, 2026
Wednesday, February 18, 2026
spot_img

ಮತ್ತೆ ಕೈಕೊಟ್ಟ ಅಭಿಷೇಕ್ ಶರ್ಮಾ: ಡಕೌಟ್ ನಲ್ಲೂ ಹೀನಾಯ ದಾಖಲೆ ಬರೆದ ಬ್ಯಾಟ್ಸಮನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಟೂರ್ನಿಯಲ್ಲಿ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಭಾರತದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಬ್ಯಾಟಿಂಗ್ ವೈಫಲ್ಯ ಮುಂದುವರೆದಿದ್ದು, ಸತತ ಮೂರನೇ ಬಾರಿಗೆ ಡಕೌಟ್ ಆಗಿದ್ದಾರೆ.

ಈ ಹಿಂದೆ ಅಮೆರಿಕ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಶೂನ್ಯ ಸುತ್ತಿದ್ದ ಅಭಿಷೇಕ್ ಶರ್ಮಾ ಇದೀಗ ನೆದರ್ಲೆಂಡ್ ವಿರುದ್ಧವೂ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿಕೊಂಡಿದ್ದಾರೆ. ಆ ಮೂಲಕ ಹ್ಯಾಟ್ರಿಕ್ ಡಕೌಟ್ ಆಗಿ ಹೀನಾಯ ದಾಖಲೆ ನಿರ್ಮಿಸಿದ್ದಾರೆ.

ಡಕೌಟ್ ನಲ್ಲೂ ಹೀನಾಯ ದಾಖಲೆ
ಅಭಿಷೇಕ್ ಶರ್ಮಾ ಈ ಡಕೌಟ್ ಕೋಚ್ ಗೌತಮ್ ಗಂಭೀರ್ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಈ ಹಿಂದೆ 2014ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಆಡಿದ್ದ ಗೌತಮ್ ಗಂಭೀರ್ ಸತತ ಮೂರು ಪಂದ್ಯಗಳಲ್ಲಿ ಡಕೌಟ್ ಆಗಿದ್ದರು. ಈ ದಾಖಲೆಯನ್ನು ಇದೀಗ ಅಭಿಷೇಕ್ ಶರ್ಮಾ ಸರಿಗಟ್ಟಿದ್ದಾರೆ.

ಅಭಿಷೇಕ್ ಇಂದಿನ ಪಂದ್ಯದ ಡಕೌಟ್ ಸೇರಿದಂತೆ ಕಳೆದ 10 ಪಂದ್ಯಗಳಲ್ಲಿ ಅವರು ಐದು ಬಾರಿ ಶೂನ್ಯಕ್ಕೆ ಔಟ್ ಆದಂತಾಗಿದೆ. ಆ ಮೂಲಕ ಅಭಿಷೇಕ್ ಶರ್ಮಾ ಕಾಲೆಂಡರ್ ವರ್ಷದಲ್ಲಿ ಗರಿಷ್ಠ ಬಾರಿ ಡಕೌಟ್ ಆದ ಭಾರತದ ಜಂಟಿ 2ನೇ ಬ್ಯಾಟರ್ ಎಂಬ ಕುಖ್ಯಾತಿಗೂ ಭಾಜನರಾಗಿದ್ದಾರೆ. ಈ ಹಿಂದೆ 2024ರಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಕೂಡ 5 ಬಾರಿ ಡಕೌಟ್ ಆಗಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !