ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಗಳಲ್ಲಿ ಚಹಾ, ಕಾಫಿ ಅಥವಾ ಬಿಸಿ ನೀರು ಮಾಡುವುದಕ್ಕೆ ಬಳಸುವ ಎಲೆಕ್ಟ್ರಿಕ್ ಕೆಟಲ್ ಕೆಲ ದಿನಗಳ ಬಳಿಕ ಒಳಗೆ ಬಿಳಿ, ಕಪ್ಪು ಕಲೆ ಜಮೆಯಾಗೋದು ಸಾಮಾನ್ಯ. ಎಷ್ಟೇ ತೊಳೆದರೂ ಆ ಕಲೆ ಹೋಗದೇ ಕೆಟಲ್ ಹಳೆಯದಾಗಿ ಕಾಣಿಸಿಸುತ್ತೆ. ಆದರೆ ಇದನ್ನ ಕ್ಲೀನ್ ಮಾಡೋಕೆ ದುಬಾರಿ ಕ್ಲೀನರ್ ಬೇಕಾಗಿಲ್ಲ; ಮನೆಯಲ್ಲಿರುವ ಕೆಲವು ಸಾಮಗ್ರಿಗಳಿಂದಲೇ ಇದನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
ಮೊದಲಿಗೆ ಕೆಟಲ್ನಲ್ಲಿ ಸಮ ಪ್ರಮಾಣದ ನೀರು ಮತ್ತು ವಿನೆಗರ್ ಹಾಕಿ ಕುದಿಯಲು ಇಡಿ. ಕುದಿದ ಬಳಿಕ ಅದನ್ನು 15–20 ನಿಮಿಷ ಹಾಗೆಯೇ ಬಿಡಿ. ನಂತರ ನೀರನ್ನು ಸುರಿದು ಒಳಭಾಗವನ್ನು ಮೃದುವಾದ ಸ್ಪಾಂಜ್ನಿಂದ ತೊಳೆಯಿರಿ. ಜಮೆಯಾಗಿರುವ ಕಲೆ ಸುಲಭವಾಗಿ ಹೋಗುತ್ತದೆ.
ಇದನ್ನೂ ಓದಿ:
ವಿನೆಗರ್ ಇಲ್ಲದಿದ್ದರೆ ಲಿಂಬೆ ರಸ ಅಥವಾ ಲಿಂಬೆ ತುಂಡುಗಳನ್ನು ನೀರಿನಲ್ಲಿ ಹಾಕಿ ಕುದಿಸಬಹುದು. ಲಿಂಬೆಯಲ್ಲಿರುವ ಅಮ್ಲೀಯ ಗುಣ ಕಲೆಗಳನ್ನು ಕರಗಿಸುತ್ತದೆ. ಕೊನೆಯಲ್ಲಿ ಶುದ್ಧ ನೀರಿನಿಂದ ಎರಡು ಬಾರಿ ಕುದಿಸಿ ತೊಳೆಯುವುದು ಉತ್ತಮ.
ಕೆಟಲ್ ಅನ್ನು ಪ್ರತೀ ವಾರ ಒಮ್ಮೆ ಹೀಗೇ ಸ್ವಚ್ಛಗೊಳಿಸಿದರೆ ಕಲೆ ಜಮೆಯಾಗುವುದನ್ನು ತಡೆಯಬಹುದು. ಸರಿಯಾದ ಆರೈಕೆ ಮಾಡಿದರೆ ನಿಮ್ಮ ಕೆಟಲ್ ಹೆಚ್ಚು ದಿನಗಳ ಕಾಲ ಹೊಸದಿನಂತೆ ಹೊಳೆಯುತ್ತದೆa



