ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಸೂಪರ್ 8 ಹಂತದಲ್ಲಿ ಕ್ರಿಕೆಟ್ ಪ್ರಿಯರ ಕಾತರತೆಯ ನಡುವೆಯೇ ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಅತಿ ದೊಡ್ಡ ಕ್ರಿಕೆಟ್ ಮೈದಾನವಾದ ನರೇಂದ್ರ ಮೋದಿ ಸ್ಟೇಡಿಯಂ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ಎರಡೂ ತಂಡಗಳು ಲೀಗ್ ಹಂತದಲ್ಲಿ ಅಜೇಯವಾಗಿ ಮುನ್ನಡೆದಿದ್ದು, ಇಂದಿನ ಕದನ ರೋಚಕವಾಗುವ ನಿರೀಕ್ಷೆ ಇದೆ. ಟೀಂ ಇಂಡಿಯಾದಲ್ಲಿ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಹಾಗೂ ರಿಂಕು ಸಿಂಗ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಆಲ್‌ರೌಂಡ್ ಆಟದಿಂದ ತಂಡಕ್ಕೆ ಬಲ ನೀಡಿದ್ದು, ಬೂಮ್ರಾ ಮತ್ತು ಕುಲ್ದೀಪ್ ಯಾದವ್ ಬೌಲಿಂಗ್ ದಾಳಿಗೆ ಅಸ್ತ್ರವಾಗಿದ್ದಾರೆ. ಆದರೆ ಆರಂಭಿಕ ಆಟಗಾರರ ಫಾರ್ಮ್ ಚಿಂತೆಗೆ ಕಾರಣವಾಗಿದೆ.
ಇದನ್ನೂ ಓದಿ:
ಇತ್ತ ದಕ್ಷಿಣ ಆಫ್ರಿಕಾ 2024ರ ಫೈನಲ್ ಸೋಲಿಗೆ ಪ್ರತೀಕಾರದ ಉದ್ದೇಶದಿಂದ ಕಣಕ್ಕಿಳಿಯುತ್ತಿದೆ. ಕ್ವಿಂಟನ್ ಡಿ ಕಾಕ್, ಡೇವಿಡ್ ಮಿಲ್ಲರ್ ಹಾಗೂ ಆಡಮ್ ಮರ್ಕ್ರಮ್ ಬ್ಯಾಟಿಂಗ್ ಶಕ್ತಿ, ರಬಾಡಾ ಮತ್ತು ಕೇಶವ ಮಹರಾಜ್ ಬೌಲಿಂಗ್ ಬಲ ತಂಡದ ವಿಶ್ವಾಸ.
ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತಕ್ಕೆ ಸ್ಪಷ್ಟ ಮೇಲುಗೈ ಇದೆ. ಏಳು ಮುಖಾಮುಖಿಗಳಲ್ಲಿ ಐದು ಬಾರಿ ಟೀಂ ಇಂಡಿಯಾ ಗೆಲುವು ದಾಖಲಿಸಿದೆ.



